ಖಾನಾಪುರ :
ಖಾನಾಪುರದ ಆಶ್ರಯ ಕಾಲನಿಯಲ್ಲಿ ರವಿವಾರ ರಾತ್ರಿ ಭೀಕರ ಕೊಲೆ ನಡೆದಿದೆ.
ಪತ್ನಿಯನ್ನು ಕಾಡಿಸಿದ ಎಂಬ ಕಾರಣಕ್ಕೆ
ಕಟ್ಟಿಗೆಯಿಂದ ತಲೆಗೆ ತೀವ್ರವಾಗಿ ಹೊಡೆದು ನಂತರ ಚಾಕುವಿನಿಂದ ಕೊಲೆಗೈಯಲಾಗಿದೆ.
ಮಾರುತಿ ಯಾನೆ ಕೃಷ್ಣ ಗಣು ರಾವ್ ಜಾಧವ್(45) ಕೊಲೆಯಾದ ವ್ಯಕ್ತಿ. ಪ್ರಶಾಂತ್ ದತ್ತಾತ್ರೆಯ ನಾರ್ವೇಕರ್ (35) ಕೊಲೆಗೈದವ. ಪ್ರಶಾಂತ ಮಾರುತಿಯನ್ನು ಕಟ್ಟಿಗೆಯಿಂದ ತಲೆಗೆ ಹೊಡೆದು ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಸದ್ಯ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.