ಇಟಗಿ :
ಇಟಗಿ ಗ್ರಾಮದಲ್ಲಿ ನೂತನ ಶ್ರೀ ಸಾಯಿನಾಥ ಮಂದಿರದ ಲೋಕಾರ್ಪಣೆ ಅಂಗವಾಗಿ ಶ್ರೀ ಶಿರಡಿ ಸಾಯಿಬಾಬಾ ಅವರ ಮೂರ್ತಿಯ ಭವ್ಯ ಮೆರವಣಿಗೆ ಅದ್ದೂರಿಯಿಂದ ನಡೆಯಿತು.
ಶ್ರೀ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಆರಂಭಗೊಂಡ ಮೆರವಣಿಗೆ ಅರ್ಭಟ ಬೀದಿ, ಅಗಸಿ, ನೆಹರು ನಗರ, ದೊಡ್ಡೋಣಿ, ಪೇಟೆ ಸೇರಿದಂತೆ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಡಾಲ್ಬಿ ಹಾಡುಗಳಿಗೆ ಯುವಕರು ಹೆಜ್ಜೆ ಹಾಕಿದರು. ಪೂರ್ಣ ಕುಂಭಗಳು ಹಾಗೂ ಆರತಿಯೊಂದಿಗೆ ನೂರಾರು ಸುಮಂಗಲೆಯರು, ವಿವಿಧ ವಾಧ್ಯಗಳು ಮೆರಗು ತಂದವು. ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಮೆರವಣಿಗೆ ಸಂಜೆ 6 ಗಂಟೆವರೆಗೆ ಅದ್ದೂರಿಯಿಂದ ನಡೆಯಿತು.
ಮಲಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ನಾಸೀರ ಬಾಗವಾನ ಶ್ರೀ ಶಿರಡಿ ಸಾಯಿಬಾಬಾ ಅವರ ಮೂರ್ತಿಯ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಚಿಕ್ಕಮುನವಳ್ಳಿಯ ಶ್ರೀ ಶಿವಪುತ್ರ ಶ್ರೀಗಳು, ಸಾಯಿಬಾಬಾ ಮೂರ್ತಿಧಾನಿ ಶ್ರೀಕಾಂತ ಮಲ್ಲೂರ, ವಿಶ್ವನಾಥ ತಿರುಮಲ, ವಿಜಯ ಅಮಟೆ, ಶ್ರೀ ಜಗದೀಶ, ವೀರೇಶ ಹೊಳೆಪ್ಪನವರ, ನಂದಗಡ ಸಿಪಿಐ ಬಸವರಾಜ ಲಮಾಣಿ ಹಾಗೂ ಇತರರು ಉಪಸ್ಥಿತರಿದ್ದರು.