ಉದ್ಯಮಬಾಗ ಪೊಲೀಸರಿಂದ ಉತ್ತಮ ಕಾರ್ಯಾಚರಣೆ ..!
7 ಬೈಕ್ ಕದ್ದ ಕಳ್ಳರ ಬಂಧನ ..!
ಬೆಳಗಾವಿ: ನಗರ ಪೊಲೀಸ್ ಆಯುಕ್ತ ಹಾಗೂ ಡಿಸಿಪಿ (ಅಪರಾಧ ಹಾಗೂ ಸಂಚಾರ) ಪಿ ವಿ ಸ್ನೆಹಾ ಅವರ ಮಾರ್ಗದರ್ಶನದಲ್ಲಿ ಉದ್ಯಮಬಾಗ ಪಿಐ ನೇತೃತ್ವದಲ್ಲಿ ಅವರ ತಂಡ ಅಪರಾಧ ಸಂಖ್ಯೆ 01/2023 ಕಲಂ 379 ಐಪಿಸಿ (ಬೈಕ್ ಕಳ್ಳತನ) ಪ್ರಕರಣದಲ್ಲಿ ಖಚಿತವಾದ ಮಾಹಿತಿ ಕಲೆ ಹಾಕಿ ಲಕ್ಷಾಂತರ ರೂ ಮೌಲ್ಯದ ಬೈಕ್ ಗಳನ್ನು ಕದ್ದ ಇಬ್ಬರು ಖದಿಮ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1] ಹೈದರಲಿ ಮುಸ್ಲಿಂಅಲಿ ಶೇಖ್ ಸಾ|| ಎ.ಪಿ.ಜೆ ಅಬ್ದುಲ್ ಕಲಾಂ ಕಾಲೋನಿ ಪೀರಣವಾಡಿ ಬೆಳಗಾವಿ.
2] ಮೋದಿನ @ ನದೀಮ ಸಂಶೋದಿನ ಪೋಟೇಗಾರ ಸಾ|| ಕೆ/ಆಪ್ ಮುರಾದಮುಲ್ಲಾ 2 ನೇ ಕ್ರಾಸ್, ಅಮನ ನಗರ, ನ್ಯೂ ಗಾಂದಿನಗರ ಬೆಳಗಾವಿ ಇವರು ಬಂಧಿತ ಆರೋಪಿಗಳು.
ಡಿ 04/01/2022 ರಂದು ಈ ಇಬ್ಬರನ್ನು ದಸ್ತಗಿರಿ ಮಾಡಿ, ಆರೋಪಿಗಳು ಕದ್ದ ವಿವಿಧ ಕಂಪನಿಯ ಒಟ್ಟು 07 (ಹೀರೊ ಸ್ಪೆಂಡರ್-02, ಆಕ್ಟಿವಾ-02, ಡಿಯೋ-01 ಆಕ್ಸಿಸ್-01, ಯಮಹಾ ಎಫ್ಝಡ್-01) ಮೋಟರ್ ಸೈಕಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು ರೂ.1,85,000/- ಮೌಲ್ಯದ ವಿವಿಧ ಕಂಪನಿಗಳ 07 ಮೋಟರ್ ಸೈಕಲ್ಗಳನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಉದ್ಯಮಭಾಗ ಪಿಐ ರಾಮಣ್ಣ ಬಿರಾದಾರ, ಪಿಎಸ್ಐ ಆರ್. ಪಿ. ಕದಂ ಮತ್ತು ಸಿಬ್ಬಂದಿ ಐ. ಎಸ್. ಪಾಟೀಲ, ಜೆ. ಎಪ್ ಹಾದಿಮನಿ, ಎ. ಬಿ ಚಿದನೂರ, ಎಸ್. ಎ. ಕರ್ಕಿ, ಐ. ಎಮ್ ಚವಲಗಿ ರವರ ತಂಡವನ್ನು ಪೊಲೀಸ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ.