ಚಿಕ್ಕೋಡಿ: ಬೋರಗಾಂವ ಬಳಿ ಅಂಗವಿಕಲ ಒಬ್ಬರು ತಮ್ಮ ವಿಶೇಷ ವಾಹನದಲ್ಲಿ ಹೊರಟಾಗಿ, ಕಬ್ಬು ತುಂಬಿದ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಿಂಬದಿ ಸವಾರ ಗಾಯಗೊಂಡಿದ್ದಾರೆ.
ಭೂಪಾಲ ಲಗಮಣ್ಣ ಅಮ್ಮಣ್ಣವರ (71) ಮೃತರು. ಹಿಂಬದಿ ಕುಳಿತಿದ್ದ ಮಕ್ಯೂಲ್ ಹುಸೇನ್ ಗಾವಂಡಿ (66) ಗಾಯಗೊಂಡಿದ್ದಾರೆ.
ಕಾರದಗಾ ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಂಗವಿಕಲರ ವಿಶೇಷ ವಾಹನದಲ್ಲಿ ಗ್ರಾಮಕ್ಕೆ ವಾಪಸಾಗುತ್ತಿದ್ದರು. ಬೋರಗಾಂವ ವಾಡಿ ಬಳಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯ ಹಿಂಬದಿ ಚಕ್ರದಡಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ.
ಸದಲಗಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು.