ನವದೆಹಲಿ:
ತ್ರಿಪುರಾವನ್ನು ಪೂರ್ಣ ಬಹುಮತದೊಂದಿಗೆ ಉಳಿಸಿಕೊಳ್ಳಲು ಬಿಜೆಪಿ ಸಜ್ಜಾಗಿದೆ.
ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸೋಮವಾರ ಭವಿಷ್ಯ ನುಡಿದಿದೆ.
ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ 36 ರಿಂದ 45 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಆದರೆ
ತಿಪ್ರಾಮೋಥಾ ಪಕ್ಷವು 9 ರಿಂದ 16 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಮತ್ತು ಎಡ-ಕಾಂಗ್ರೆಸ್ ಒಕ್ಕೂಟವು 6 ರಿಂದ 11 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಚುನಾಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ.
ಬಿಜೆಪಿ-ಐಪಿಎಫ್ಟಿ ಒಕ್ಕೂಟಕ್ಕೆ 45 % ರಷ್ಟು ಮತಗಳು
ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾದ ಪ್ರಕಾರ ಬಿಜೆಪಿ-ಐಪಿಎಫ್ಟಿ ಮೈತ್ರಿಕೂಟವು ಶೇಕಡಾ 45 ರಷ್ಟು ಮತಗಳನ್ನು ಗಳಿಸುವ ಸಾಧ್ಯತೆಯಿದೆ, ಇದೇವೇಳೆ ಎಡ-ಕಾಂಗ್ರೆಸ್ ಮೈತ್ರಿಕೂಟವು ಶೇಕಡಾ 32 ರಷ್ಟು ಮತಗಳನ್ನು ಗಳಿಸಬಹುದು ಎಂದು ಅದು ಹೇಳಿದೆ. ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮಾ ನೇತೃತ್ವದ ತಿಪ್ರಾ ಮೋಥಾ ಶೇ.20 ರಷ್ಟು ಮತ ಗಳಿಸುವ ನಿರೀಕ್ಷೆಯಿದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ.
ತ್ರಿಪುರಾ ಫೆಬ್ರವರಿ 16 ರಂದು ಮತದಾನ ನಡೆದಿತ್ತು.
ಝೀ ನ್ಯೂಸ್-ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಕೂಡ ತ್ರಿಪುರಾದಲ್ಲಿ ಬಿಜೆಪಿ 29 ರಿಂದ 36 ಮತಗಳನ್ನು ಗಳಿಸುತ್ತದೆ ಎಂದು ಭವಿಷ್ಯ ನುಡಿದಿದೆ. ಎಡ-ಕಾಂಗ್ರೆಸ್ ಮೈತ್ರಿಕೂಟ 13-21 ಸ್ಥಾನಗಳೊಂದಿಗೆ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ.
ತಿಪ್ರಾಮೋತಾ 11-16 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಆದಾಗ್ಯೂ, ಟೈಮ್ ನೌ-ಇಟಿಜಿ ರಿಸರ್ಚ್ ಬಿಡುಗಡೆ ಮಾಡಿದ ಎಕ್ಸಿಟ್ ಪೋಲ್ ತ್ರಿಪುರಾದಲ್ಲಿ ಅತಂತ್ರ ತೀರ್ಪು ಎಂದು ಹೇಳಿದೆ. ಸಮೀಕ್ಷೆಯ ಪ್ರಕಾರ, ಬಿಜೆಪಿ 24 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ.
ಆದರೆ, ಸಿಪಿಐ(ಎಂ)-ಕಾಂಗ್ರೆಸ್ ಮೈತ್ರಿ 21 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ತಿಪ್ರಾ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನಾಗಾಲ್ಯಾಂಡ್ನಲ್ಲಿಯೂ ಬಿಜೆಪಿಗೆ ಅಧಿಕಾರ :
ನಾಗಾಲ್ಯಾಂಡ್ನಲ್ಲಿಯೂ ಬಿಜೆಪಿ-ಎನ್ಡಿಪಿಪಿ (BJP-NDPP) ಮೈತ್ರಿಕೂಟ 60 ಸ್ಥಾನಗಳ ಅಸೆಂಬ್ಲಿಯಲ್ಲಿ 35-43 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಝೀ-ಮಾಟ್ರೈಝ್ (Zee Matrize) ಎಕ್ಸಿಟ್ ಪೋಲ್ ಹೇಳಿದೆ. ನಾಗಾ ಪೀಪಲ್ಸ್ ಫ್ರಂಟ್ 2-5, ಮತ್ತು ಕಾಂಗ್ರೆಸ್ 1-3 ಸ್ಥನಗಳನ್ನು ಗಳಿಸಲಿದೆ ಎಂದು ಅದು ಹೇಳಿದೆ.
ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ ಪ್ರಕಾರ, ಎನ್ಡಿಪಿಪಿ-ಬಿಜೆಪಿ ಮೈತ್ರಿಯು ನಾಗಾಲ್ಯಾಂಡ್ನಲ್ಲಿ ಕ್ರಮವಾಗಿ 28-34 ಮತ್ತು 10-14 ಸ್ಥಾನಗಳನ್ನು ಗೆಲ್ಲಲಿದೆ. ಮತ್ತೊಂದೆಡೆ, ಎನ್ಪಿಎಫ್ 3-8, ಕಾಂಗ್ರೆಸ್ 1-2 ಮತ್ತು ಇತರರು 5-15 ಸ್ಥಾನಗಳನ್ನು ಪಡೆಯಲಿದ್ದಾರೆ ಅದು ಹೇಳಿದೆ.
ಮೇಘಾಲಯದಲ್ಲಿ ತೀವ್ರ ಹಣಾಹಣಿ….
ಝೀ ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ- ಮೇಘಾಲಯ ವಿಧಾನಸಭೆಯ 60 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎನ್ಪಿಪಿ 21-26 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ 6-11 ಸ್ಥಾನಗಳನ್ನು ಟಿಎಂಸಿ 8-13 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 3-6 ಸ್ಥಾನಗಳನ್ನು ಪಡೆಯಲಿದೆ ಎಂದು ಅದು ಭವಿಷ್ಯ ನುಡಿದಿದೆ.
ಕಾನ್ರಾಡ್ ಸಂಗ್ಮಾ ಅವರ ಎನ್ಪಿಪಿ ಮೇಘಾಲಯದಲ್ಲಿ 18 ರಿಂದ 26 ಸ್ಥಾನಗಳನ್ನು ಗೆಲ್ಲಲಿದೆ ಎಂದು ಟೈಮ್ ನೌ-ಇಟಿಜಿ ರಿಸರ್ಚ್ ಎಕ್ಸಿಟ್ ಪೋಲ್ ತೋರಿಸಿದೆ. ತೃಣಮೂಲ ಕಾಂಗ್ರೆಸ್ 8-14 ಸ್ಥಾನಗಳನ್ನು ಮತ್ತು ಕಾಂಗ್ರೆಸ್ ಎರಡರಿಂದ ಐದು ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.