ಬೆಳಗಾವಿ: ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಡಿಸೆಂಬರ್ 10 ರ ಬುಧವಾರ ಅಥಣಿ ಸಂಪೂರ್ಣ ಬಂದ್ ಕರೆ ನೀಡಲಾಗಿದೆ.
ಅಥಣಿ, ಕಾಗವಾಡ, ಜಮಖಂಡಿ, ತೇರದಾಳ, ರಾಯಬಾಗ, ನಿಯೋಜಿತ ಹಾರೂಗೇರಿ ತಾಲೂಕುಗಳನ್ನು ಒಟ್ಟು ಸೇರಿಸಿ ನೂತನವಾಗಿ ಅಥಣಿ ಜಿಲ್ಲಾ ಕೇಂದ್ರ ಮಾಡಬೇಕು. ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದ್ದು ಸರಕಾರ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.


