ಬೆಳಗಾವಿ : ನೆರೆಯ ಸಾಂಗ್ಲಿಯಲ್ಲಿ ಬೆಳಗಾವಿಯ ಎಂಬಿಬಿಎಸ್ ವಿದ್ಯಾರ್ಥಿನಿ ಮೇಲೆ ಆಕೆಯ ಇಬ್ಬರು ಸ್ನೇಹಿತರು ಹಾಗೂ ಮತ್ತೊಬ್ಬ ಸ್ನೇಹಿತ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೇ 18 ರಂದು ಮಧ್ಯರಾತ್ರಿ ಯುವತಿ ಸ್ನೇಹಿತರ ಜೊತೆ ಸಿನಿಮಾಕ್ಕೆ ಹೋಗಿದ್ದಳು. ನಂತರ ಆಕೆಯನ್ನು ಅವರು ಖಾಸಗಿ ಪ್ಲಾಟ್ ಗೆ ಕರೆದುಕೊಂಡು ಹೋಗಿ ಆಕೆಗೆ ಪಾನಿಯಾದಲ್ಲಿ ಮಾತ್ರೆ ಹಾಕಿಕೊಟ್ಟು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದಾರೆ. ನಂತರ ಯುವತಿಗೆ ಪ್ರಜ್ಞೆ ಬಂದ ನಂತರ ಘಟನೆಯನ್ನು ಬೆಳಗಾವಿಯ ತಮ್ಮ ಮನೆಯವರಿಗೆ ತಿಳಿಸಿದ್ದಾಳೆ. ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.