ಪತ್ರಕರ್ತರು ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಸಂತಸದ ಸಂಗತಿ: ಡಾ. ಪ್ರಭಾಕರ ಕೋರೆ
ಬೆಳಗಾವಿ: ಪತ್ರಕರ್ತರು ಸಮಾಜದ ಒಂದು ಅವಿಭಾಜ್ಯ ಅಂಗ. ಮಕ್ಕಳಿಗಾಗಿ ಮೊದಲ ಬಾರಿಗೆ ಪ್ರೋತ್ಸಾಹ ನೀಡಲು ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ ಎಂದು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಹೇಳಿದರು.
ನಗರದ ಎಸ್.ಜಿ.ಬಾಳೇಕುಂದ್ರಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ವಿಶಿಷ್ಟ ಸಾಧನೆಗೈದ ಪತ್ರಕರ್ತರ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ವಿಶಿಷ್ಟ ಸಾಧನೆಗೈದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ನಮಗೂ ಖುಷಿ ತಂದಿದೆ. ಮುಂದೆಯೂ ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಶಾಸಕ ಆಸೀಫ್ (ರಾಜು) ಸೇಠ್ ಮಾತನಾಡಿ, ಸಮಾಜ ತಿದ್ದುವ ಪತ್ರಕರ್ತರು ಕಠಿಣ ಪರಿಸ್ಥಿತಿಯಲ್ಲಿಯೂ ತಮ್ಮ ಸೇವೆ ಸಲ್ಲಿಸುತ್ತಾರೆ. ಅವರ ಮಕ್ಕಳು ಕೂಡ ತಂದೆ ತಾಯಿಯ ವೃತ್ತಿಯ ಮಹತ್ವವನ್ನು ಅರಿತು ಕಠಿಣ ಪರಿಶ್ರಮ ಪಟ್ಟು ತಮ್ಮ ಗುರಿ ಮುಟ್ಟಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಶಾಸಕ ಅಭಯ್ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳನ್ನು ಸನ್ಮಾನಿಸಿರುವುದು ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ. ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ಪ್ರಜೆಯಾಗಿ ತಂದೆ ತಾಯಿಯ ಸೇವೆಯೊಂದಿಗೆ ಸಮಾಜದ ಸೇವೆಯನ್ನು ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಕೆಟ್ಟ ದಾರಿ ತುಳಿದು ಸಮಾಜಘಾತುಕ ಕಾರ್ಯಗಳನ್ನು ಮಾಡಬಾರದು ಎಂದು ತಿಳಿ ಹೇಳಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಗುಲಾಬರಾವ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾಪೌರ ಮಂಗೇಶ ಪವಾರ, ಉಪಮಹಾಪೌರ ವಾಣಿ ವಿಲಾಸ ಜೋಶಿ, ಪತ್ರಕರ್ತರರ ಸಂಘದ ಅಧ್ಯಕ್ಷ ವಿಲಾಸ ಜೋಶಿ, ಉಪಾಧ್ಯಕ್ಷರು ಶ್ರೀಶೈಲ ಮಠದ, ಮುನ್ನಾ ಬಾಗವಾನ್ , ರವಿ ಗವಳಿ, ಮಹೇಶ ಬಿಜಾಫುರ, ರಾಜಶೇಖರ್ ಹಿರೇಮಠ, ಸುನೀಲ ಪಾಟೀಲ, ರಾಮಚಂದ್ರ ಸುಣಗಾರ, ಕುಂತಿನಾಥ ಕಲಮಣಿ, ಅರುಣ ಹಳ್ಳೂಕರ್ , ಸುರೇಶ ನೇರ್ಲಿ, ಪಿಕೆ ಬಡಿಗೇರ, ಜಗದೀಶ ವಿರಕ್ತಮಠ, ರವಿ ಉಪ್ಪಾರ, ರವಿ ಗೋಸಾವಿ, ಸಂತೋಷ ಚಿಣಕುಡಿ, ಮಂಜುನಾಥ ಕೊಳಿಕುಡ್ಡ, ಕೀರ್ತಿ ಕಾಸರಗೂಡ, ಪ್ರಶಾಂತ ಗೋಂದಳಿ, ಅಶೋಕ ಮಗದುಮ್ಮ, ಸಾಗರ , ಸುನೀತಾ ಪಾಟೀಲ, ಅಶೋಕ ಮುದ್ದಣ್ಣವರ , ರಜನಿಕಾಂತ ಯಾದವಾಡ, ಪ್ರಶಾಂತ, ಪರಶುರಾಮ, ಅವರನ್ನು ಸೇರಿದಂತೆ ಗಣ್ಯರಿಂದ ಸಾಧನೆಗೈದ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಲಾಯಿತು.