ಬೆಳಗಾವಿ : 5 ವರ್ಷದ ಮಗುವಿನ ಕೊಲೆ ಮಾಡಿದ ವ್ಯಕ್ತಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹1.10 ಲಕ್ಷ ದಂಡ ವಿಧಿಸಿದೆ.
ಪರಶುರಾಮ ಜಾಧವ (37) ಅಪರಾಧಿ. ರಾಯಬಾಗ ತಾಲೂಕಿನ ಶಾಹು ಪಾರ್ಕ್ನ ನಿವಾಸಿ ಮಹೇಶ ಅಶೋಕ ಬಾಗಡಿ ಎಂಬ ಬಾಲಕನನ್ನು ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿದ್ದ. 2019ರ ಮೇ 4ರಂದು ಕೊಲೆ ಘಟನೆ ನಡೆದಿತ್ತು. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಹೇಶನ ತಾಯಿ ಜೊತೆ ಅಕ್ರಮ ಸಂಬಂಧ ಹೊಂದಿದ ಆರೋಪಿ ಪರಶುರಾಮ ಜಾಧವ ತನ್ನ ಆಸ್ತಿಯಲ್ಲಿ ಮಗು ಪಾಲುದಾರನಾಗುತ್ತಾನೆ ಎಂದು ಕೊಲೆ ಮಾಡಿರುತ್ತಾನೆ ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದರಿಂದ, ನ್ಯಾಯಾಧೀಶರಾದ ತಾರಕೇಶ್ವರಗೌಡ ಪಾಟೀಲ ಶಿಕ್ಷೆ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ವಾದ ಮಂಡಿಸಿದ್ದರು.