ಜನ ಜೀವಾಳ ಜಾಲ: ಬೆಳಗಾವಿ :
ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 5 ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ. ಇಲ್ಲಿಯ ಹಳೆ ಗಾಂಧಿನಗರ ಬ್ರಿಡ್ಜ್ ಮೇಲೆ
ರವಿವಾರ ಸಂಜೆ ಘಟನೆ ನಡೆದಿದೆ. ವರ್ಧನ್ ಈರಣ್ಣ ಬ್ಯಾಳಿ ಮೃತಪಟ್ಟ ಮಗು.
ದೀಪಾವಳಿಗೆ ಬೆಳಗಾವಿಯ ಮಾರ್ಕೆಟ್ ನಲ್ಲಿ ಬಟ್ಟೆ ಖರೀದಿಸಿ ವಡಗಾವಿಯ ಮಾವನ ಮನೆಗೆ ಭೇಟಿ ನೀಡಿ ಬಳಿಕ ಹುಕ್ಕೇರಿ ತಾಲೂಕಿನ ಹತ್ತರಗಿಗೆ ತಂದೆಯೊಂದಿಗೆ ಬೈಕ್ ಮೇಲೆ ಹೊರಟಿದ್ದ ವೇಳೆ ಮಗುವಿನ ಕುತ್ತಿಗೆಗೆ ಬಿಗಿಯಾಗಿ ಸಿಲುಕಿದ ಮಾಂಜಾ ದಾರದಿಂದ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲಗಾ ಗ್ರಾಮದ ಜ್ಯೋತಿಭಾ ಹನುಮಂತಾಚೆ (42) ನ್ಯೂ ಗಾಂಧಿ ನಗರ ಹತ್ತಿರ ಮಂಜಾ ದಾರ ತಾಗಿ ಕತ್ತು ಸೀಳಿ ಅಲ್ಪದರಲ್ಲೆ ಪ್ರಾಣಾಯಾಮದಿಂದ ಪಾರಾಗಿದ್ದಾರೆ.