ಬೆಳಗಾವಿ:
ಕಳೆದ ಐದಾರು ವರ್ಷಗಳಿಂದ ಕುಂಟುತ್ತ ತೆವಳುತ್ತ ಸಾಗಿದ್ದ ಇಲ್ಲಿ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿ ಫಿನಿಶಿಂಗ್ ಕಾಣುವ ಮುಂಚೆಯೇ ಉದ್ಘಾಟನೆ ಇಂದು ಸಂಜೆ 6ಕ್ಕೆ ತರಾತುರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಬೇಕಾಬಿಟ್ಟಿಯಾಗಿ ಪ್ಲಾನ್ ರಹಿತ ಕಟ್ಟಲಾದ ಕಟ್ಟಡಕ್ಕೆ ಇಂದು ಉದ್ಘಾಟನೆ ಭಾಗ್ಯ ಸಿಗಲಿದ್ದು, ಫಿನಿಶಿಂಗ್ ಲೆಸ್ ಕಾಮಗಾರಿ ತೀವ್ರ ಅಸಹ್ಯ ಮೂಡಿಸುವಂತಿದೆ.
ಎರಡು ದಶಕಗಳ ಹಿಂದೆ ಹಾಕಬೇಕಾದ ಖುರ್ಚಿಗಳು, ತರಾತುರಿಯಲ್ಲಿ ಬಣ್ಣ ಬಳೆಯುವ, ಈಗಾಗಲೇ ಅಲ್ಲಲ್ಲಿ ಒಡೆದು ಹೋದ ನೆಲಹಾಸು ಮತ್ತು ಪೂರ್ಣವಾಗದ ಕಾಮಗಾರಿಗಳ ನಡುವೆ ಹೊಸ ಸೀರೆ ಉಡಿಸಿ, ಲೈಟ್ ಅಲಂಕಾರ ಮಾಡಿ ಇಂದು ಉದ್ಘಾಟನೆಗೆ ಅಣಿಗೊಳಿಸಲಾಗಿದೆ
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಸ್ ಸ್ಟ್ಯಾಂಡ್ ಭಾಗ್ಯ ಕಂಡ ಬೆಳಗಾವಿಗೆ ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ್ದರು. ರಾಜ್ಯದ ಎರಡನೇ ರಾಜಧಾನಿ ಬೆಳಗಾವಿ, ಜೊತೆಗೆ 2022ನೇ ಇಸವಿಯಲ್ಲಿ ಕಟ್ಟಬೇಕಾದ ದರ್ಜೆಯ ಬಸ್ ನಿಲ್ದಾಣ ಇದಲ್ಲ, ಇದು ಉದ್ಘಾಟನೆ ಮುಂಚೆಯೇ ಹಳೆ ಕಟ್ಟಡದಂತೆ ಕಾಣುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ ಬಸ್ ನಿಲ್ದಾಣ ಉದ್ಘಾಟನೆ ಆಗಲಿದ್ದು, ಫಿನಿಶಿಂಗ್ ಕಾಣದ ಕಳಪೆ ಕಾಮಗಾರಿಯ ಕೇಂದ್ರ ಬಸ್ ನಿಲ್ದಾಣದ ಕಥೆ ಎಂಥದ್ದು ಎಂದು ಜನ ಚಿಂತಾಕ್ರಾಂತರಾಗಿದ್ದಾರೆ.
ಬೆಳಗಾವಿ ಜಿಲ್ಲೆಗೆ ಅದೂ ಇಂತಹ ಅತ್ಯಾಧುನಿಕ ಕಾಲದಲ್ಲಿ ಇಷ್ಟು ಕಳಪೆ ದರ್ಜೆಯ ಕಟ್ಟಡ ಕಟ್ಟಿ ಜನರನ್ನು ಮಂಗ ಮಾಡುವ ರಾಜಕಾರಣಿಗಳು ಹಾಗೂ ಉದ್ಘಾಟನೆ ಮಾಡಿ ಕ್ರೆಡಿಟ್ ತೆಗೆದುಕೊಳ್ಳುವ ಬಿಜೆಪಿ ಸರಕಾರದ ನಡೆ ಅಸಹ್ಯ ಮೂಡಿಸಿದೆ.