ಬೆಳಗಾವಿಯಲ್ಲಿ ಯೋಧನಿಂದ ಯುವಕನ ಮೇಲೆ ಹಲ್ಲೆ, ಸ್ಥಿತಿ ಗಂಭೀರ ..!
ಮಾರಾಮಾರಿ ಮಾಡಿ ಪೊಲೀಸರೊಂದಿಗೆ ರಂಪಾಟ ಮಾಡುತ್ತಿದ್ದವನನ್ನು ಮೆತ್ತಗೆ ಮಾಡಿದ ಕಾಕತಿ PSI ರವಿ..!
ಬೆಳಗಾವಿ : ಗ್ರಾಮದಲ್ಲಿ ಮೊದಲಿನಿಂದಲೂ ಒಂದಲ್ಲಾ ಒಂದು ಕಾರಣಕ್ಕಾಗಿ ಜಗಳ ಮಾಡುತ್ತ ಸುದ್ದಿಯಲ್ಲಿರುತ್ತಿದ್ದ ಬೆಳಗಾವಿ ತಾಲೂಕಿನ ಕೇದನೂರ ಗ್ರಾಮದ ಯೋಧನೊಬ್ಬ ನಿನ್ನೆ ರಾತ್ರಿ ತನ್ನ ಮಗ ಹಾಗೂ ತಾಯಿ ಜತೆ ಸೇರಿಕೊಂಡು ಯುವಕರ ಮೇಲೆ ಕೂಡಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ಕೇದನೂರ ಗ್ರಾಮದ 45 ವರ್ಷದ ಯೋಧ ಗೋಪಾಲ ಅಣ್ಣಪ್ಪ ಸಂಭಾಜೀ ಎಂಬಾತ ತನ್ನ 19 ವರ್ಷದ ಮಗ ಅನುರಾಗ ಗೋಪಾಲ ಸಂಭಾಜೀ ಹಾಗೂ 70 ವರ್ಷದ ತಾಯಿ ರೇಣುಕಾ ಅಣ್ಣಪ್ಪ ಸಂಭಾಜೀ ಎಂಬುವರು ಯುವಕರ ಕೊಲೆ ಯತ್ನ ನಡೆಸಿ ಪೊಲೀಸರ ಅತಿಥಿಯಾಗಿರುವ ಆರೋಪಿಗಳು.
ಆಗಿದ್ದೇನು..?
ನಿನ್ನೆ ಯೋಧ ಸಂಭಾಜೀ ತನ್ನ ಗೆಳೆಯನೊಂದಿಗೆ ಸಂಭಾಷಣೆ ಮಾಡುವ ಸಂದರ್ಭದಲ್ಲಿ ಅದೇ ಗ್ರಾಮದ ಗುತ್ತಿಗೆದಾರ ಹಾಗೂ ಸಮಾಜ ಸೇವಕನಾಗಿರುವ ಚಾಳೋಬಾ ಲಾಡ ಎಂಬುವನನ್ನು ಟೀಕಿಸುವ ಭರದಲ್ಲಿ ಅವರ ಪತ್ನಿ ಸಹೋದರಿ ಹಾಗೂ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅಶ್ಲೀಲವಾಗಿ ಬೈದಿದ್ದಾನೆ. ಈ ವಿಷಯ ಪಿರ್ಯಾದಿ ಕಿವಿಗೆ ಬಿದ್ದ ತಕ್ಷಣ ಯೋಧನನ್ನು ಕೇಳಲು ಅವನ ಮನೆಗೆ ಹೋಗಿದ್ದಾನೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ. ಏತನ್ಮಧ್ಯೆ ಅವನ ಮಗ ಮತ್ತು ತಾಯಿ ಸೇರಿಕೊಂಡು ಬಡಿಗೆಗಳಿಂದ ಪಿರ್ಯಾದಿ ಚಾಳೂಬಾ ಲಾಡ್ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಜಗಳ ನೋಡಿ ಬಿಡಿಸಲು ಬಂದಿದ್ದ ದಿನೇಶ್ ಶಾಪೂರಕರ, ರಾಹುಲ್ ರಾಜಾಯಿ, ಚೇತನ ಸಂಭಾಜೀ,ಪವನ ಕಣಬರಕರ ಎಂಬುವರ ಮೇಲೆ ಯೋಧ ಕೂಡಗೋಲಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು ಆತನ ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ಸುದ್ದಿ ತಿಳಿದು ತಕ್ಷಣ ಕಾಕತಿ PI ಉಮೇಶ್, PSI ರವಿ ಹಾಗೂ ಸಿಬ್ಬಂದಿ ಪ್ರಕಾಶ ಬಲ್ಲಾಳ, ದೊಡಮನಿ ಸ್ಥಳಕ್ಕೆ ಧಾವಿಸಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಿ ಆರೋಪಿಯನ್ನು ವಶಕ್ಕೆ ಪಡೆಯಲು ಹೋದಾಗ ಯೋಧ ನಾನು ಯೋಧ ಅಂತಾ ಹೇಳಿ ಅವಾಜ ಹಾಕಿದ್ದಲ್ಲದೇ, ತನ್ನ ರಕ್ಷಣೆ ಮಾಡಿಕೊಳ್ಳಲು ಮನೆ ಹೆಣ್ಣುಮಕ್ಕಳನ್ನು ಮುಂದೆಬಿಟ್ಟಿದ್ದಾನೆ. ಆಗ PSI ರವಿ , ಬಲ್ಲಾಳ, ದೊಡಮನಿ ಯೋಧನನ್ನು ಕಾನೂನಿನ ಚೌಕಟ್ಟಿನಲ್ಲಿ ಮೆತ್ತಗೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂವರು ಆರೋಪಿಗಳ ವಿರುದ್ಧ IPC ಕಲಂ 307, 504, 506, 523,524 ಹಾಗೂ 34 ನಿಯಮದಡಿ ಪ್ರಕರಣ ದಾಖಲಾಗಿದ್ದು, ಯೋಧ ಹಾಗೂ ಮಗ ಸೆರೆಹಿಡಿದಿದ್ದಾರೆ. ಸಂಜೆಯೋಳಗೆ ಇಬ್ಬರು ಹಿಂಡಲಗಾ ಜೈಲು ಸೇರಲಿದ್ದಾರೆ.
ಈ ಯೋಧ ರಜೆ ಮೇಲೆ ಬಂದಾಗಲೆಲ್ಲಾ ಮಾಡುವ ರಂಪಾಟದಿಂದ ರಾತ್ರಿಯಿಡೀ ನಡೆಯುವ ಹೈಡ್ರಾಮಾ ಗೆ ಕೇದನೂರ ಗ್ರಾಮಸ್ಥರು ಬೇಸತ್ತು ಹೋಗಿದ್ದಾಗಿ ಅಲ್ಲಿನ ಕೇಲ ಹಿರಿಯರು ತಿಳಿಸಿದ್ದಾರೆ.ಇತನಿಗೆ ಪೊಲೀಸರು ಸರಿಯಾಗಿ ಬುದ್ದಿ ಕಲಿಸುವಂತೆ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ನೂತನ ಕಮೀಷನರ್ ಇಡಾ ಮಾರ್ಟೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಕತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.