ಮುತ್ಯಾನಟ್ಟಿ ಮದ್ಯವ್ಯಸನಿಯಿಂದ ಬಾರ್ ಮ್ಯಾನೇಜರ್ ಮೇಲೆ ಮಾರಣಾಂತಿಕ ಹಲ್ಲೆ..!
ಹುಂದರಿ ದಿನ ಉದ್ರಿ ಕ್ವಾರ್ಟರ್ ಕೊಡಲ್ಲ ಅಂದವನನ್ನು ಕೂಡಗೋಲಿನಿಂದ ಕೊಚ್ಚಿದ ಕರಿಕಟ್ಟಿ..!
ಬೆಳಗಾವಿ : ಗಣೇಶ ಚತುರ್ಥಿ ಮಾರನೆಯ ದಿನ ಕರಿ ಆಚರಿಸಲು ಉದ್ರಿ ಕ್ವಾರ್ಟರ್ ಕೊಡಲ್ಲ ಅಂದ ಬಾರ ಮ್ಯಾನೇಜರ್ ಮೇಲೆ ಕೂಡಗೋಲಿನಿಂದ ಮುತ್ಯಾನಟ್ಟಿ ಮದ್ಯವ್ಯಸನಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಿನ್ನೆ (ಬುಧವಾರ) ಮಧ್ಯಾಹ್ನ ಕಾಕತಿ ಗ್ರಾಮದಲ್ಲಿ ನಡೆದಿದೆ.
ಕಾಕತಿಯಲ್ಲಿರುವ ಪೂರ್ಣಿಮಾ ಬಾರ್ ಮ್ಯಾನೇಜರ್ ಹಾಗೂ ಬೈಲಹೊಂಗಲ ತಾಲೂಕಿನ
ಗುಂಡ್ಲೂರ ಗ್ರಾಮದ ಹೀರಾಮಣಿ ದೇವೆಂದ್ರಪ್ಪ ದೂರಾಪೂರ ಹಲ್ಲೆಗೋಳಗಾದ
ವ್ಯಕ್ತಿ. ಈತನ ಮೇಲೆ ಮುತ್ಯಾನಟ್ಟಿ ಗ್ರಾಮದ ಸುನೀಲ ಬಸ್ಸಪ್ಪ ಕರಿಕಟ್ಟಿ ಎಂಬಾತ ಕೂಡಗೋಲಿನಿಂದ ಹಲ್ಲೆ ಮಾಡಿದ್ದಾನೆ.
ಆರೋಪಿಗೆ ಮದ್ಯ ಉದ್ರಿ ಕೊಡದಿದ್ದಕ್ಕೆ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ಸುನೀಲ ನಿನ್ನೆ ಹುಂದರಿ ಇದ್ದ ಕಾರಣ ಪಾರ್ಟಿ ಮಾಡುವುದಕ್ಕಾಗಿ ಮದ್ಯ ಸೇವನೆಗೆ ಬಂದಿದ್ದಾನೆ. ಆದರೆ ಹಣ ಇಲ್ಲದ ಕಾರಣ ಬಾರ್ ಮ್ಯಾನೇಜರ್ ಹೀರಾಮನಿಗೆ ಉದ್ರಿ ಮದ್ಯ ಕೊಡುವಂತೆ ಒತ್ತಾಯಿಸಿದ್ದಾನೆ. ಮ್ಯಾನೇಜರ್ ಇದಕ್ಕೆ ಒಪ್ಪದೆ ಇದ್ದಾಗ ಕೂಡಗೋಲಿನಿಂದ ಹಲ್ಲೆ ಮಾಡಿರುದಾಗಿ ತಿಳಿದು ಬಂದಿದೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾಕತಿ ಪಿಎಸ್ಐ ಮಂಜುನಾಥ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿ ಕೂಡ ತನ್ನ ಕೈಗಳಿಗೆ ತಾನೆ ಗಾಯಪಡಿಸಿಕೊಂಡು ಪೊಲೀಸರು ಬಂಧನದಲ್ಲಿ ಆಸ್ಪತ್ರೆ ಸೇರಿದ್ದಾನೆ.