ನಾಲ್ಕು ವರ್ಷದ ಬಾಲಕಿ ಮೇಲೆ 68 ವರ್ಷದವನಿಂದ ಲೈಂಗಿಕ ದೌರ್ಜನ್ಯ..!
ಪೋಕ್ಸೋ ನ್ಯಾಯಾಧೀಶೆ
ಪುಷ್ಪಲತಾ ಪನಿಷಮೇಂಟ್ ಗೆ 20 ವರ್ಷ ಜೈಲು ಸೇರಿದ ಫಕ್ರುಸಾಬ್..!
ಬೆಳಗಾವಿ ಜಿಲ್ಲಾ ಪೊಲೀಸ ತನಿಖೆಯಿಂದಾಗಿ ವರ್ಷದೊಳಗಾಯಿತು ಆರೋಪಿಗೆ ಶಿಕ್ಷೆ.
ಬೆಳಗಾವಿ : ಕಳೆದ ವರ್ಷ ಫೆಬ್ರವರಿ 24ರಂದು ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಾಲ್ಕು ವರ್ಷದ ಬಾಲಕಿಗೆ ಚಾಕಲೇಟ್ ಕೊಟ್ಟು ಪುಸಲಾಯಿಸಿ ತನ್ನ ಮನೆಗೆ ಕರೆದು ಆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 68 ವರ್ಷದ ಆರೋಪಿ ನಿಸಾರ್ ಅಹ್ಮದ್ ಫಕ್ರು ಸಾಬ್ ಚಾಪ್ಗಾವಿ, ಕಾಕರ ಗಲ್ಲಿ ನಂದಗಡ ಈತನ ವಿರುದ್ಧ ದಿನಾಂಕ 27.02.24ರಂದು ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಈ ದೂರನ್ನು ನಂದಗಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಎಸ್ ಸಿ ಪಾಟೀಲ್ ರವರು ದಾಖಲಿಸಿ ತನಿಖೆ ಪೂರೈಸಿ ದಿನಾಂಕ 17.04. 2024 ರಂದು ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪ ಪತ್ರವನ್ನು ಸಲ್ಲಿಸಿದ್ದರು. ಇದರನ್ವಯ ಆರೋಪಿಗೆ 28.02.2024 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. ತನಿಖಾ ಸಹಾಯಕರಾಗಿ ಆರ್ ಎಸ್ ಕೆಮಾಲೆ ರವರು ಕರ್ತವ್ಯ ನಿರ್ವಹಿಸಿದ್ದರು
3/4/2025 ರಂದು ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಸಿ ಎಮ್ ಪುಷ್ಪಲತಾರವರು ಆರೋಪಿಗೆ 20 ವರ್ಷ ಜೈಲು ಕಾರಾವಾಸ ಶಿಕ್ಷೆ ,10 ಸಾವಿರ ರೂಪಾಯಿಗಳ ದಂಡ ವಿಧಿಸಿದರು. ಸರ್ಕಾರದ ಪರವಾಗಿ ಎಲ್ ವಿ ಪಾಟೀಲ್ ಸರ್ಕಾರಿ ಅಭಿಯೋಜಕರಾಗಿ ನ್ಯಾಯಾಲಯದ ಮುಂದೆ ವಾದ ಮಂಡಿಸಿದರು. ಆರೋಪಿಯನ್ನು ಹಿಂಡಲಗಾ ಜೈಲಿಗಟ್ಟಲಾಗಿದೆ.