ಎತ್ತಿನ ಮೈ ತೊಳೆಯಲು ಹೋಗಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು..!
ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಾರುಣ ಘಟನೆ..!
ಬೆಳಗಾವಿ : ತಾಲೂಕಿನ ಹೊಸವಂಟಮೂರಿ ಗ್ರಾಮದ ಪಕ್ಕದಲ್ಲಿರುವ ಕೆರೆಯಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿದ್ದ 17 ವರ್ಷದಬಾಲಕನೊರ್ವ ಬಾರಿ ಮಳೆಯಿಂದಾಗಿ ನೀರು ತುಂಬಿದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.
ಹೊಸವಂಟಮೂರಿ ಗ್ರಾಮದ ನಾಗರಾಜ ಹನುಮಂತ ವಣ್ಣುರಿ (17) ಮೃತ ಬಾಲಕ.
ಬಾಲಕ ನಾಗರಾಜ ತಮ್ಮ ಮನೆಯ ಎತ್ತುಗಳನ್ನು ಮೈ ತೊಳೆಯುವಾಗ ಕೆರೆಯ ನೀರಿನ ಆಳಕ್ಕೆ ಹೋಗಿದ್ದಾನೆ. ಈಜು ಬರಲಾರದೆ ಮುಳುಗಿದ್ದಾನೆ. ಆಗ ಅಲ್ಲಿದ್ದವರು ತಕ್ಷಣ ನೋಡಿ ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಕೆರೆಯಲ್ಲೇ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ದುಖಃದ ಮೌನ ಮಡುಗಟ್ಟಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆ ಸ್ಥಳಕ್ಕೆ ಕಾಕತಿ ಪಿಎಸ್ಐ ಮಂಜುನಾಥ ನಾಯಿಕ ಹಾಗೂ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.