ಮುಂಗುಸಿ ಕಚ್ಚಿ ಬೆಂಡಿಗೇರಿಯಲ್ಲಿ 10 ವರ್ಷದ ಬಾಲಕ ಸಾವು..?
ವೈದ್ಯರು ಹೇಳಿದ್ದು ಬೇರೆ..?
ಬೆಳಗಾವಿ : ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ತಮ್ಮ ಮನೆಯ ಹಿತ್ತಲದಲ್ಲಿ ಆಟ ಆಡುತಿದ್ದ ಬಾಲಕನಿಗೆ ಮುಂಗುಸಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಬೆಂಡಿಗೇರಿ ಗ್ರಾಮದ ಮಾರುತಿ ಗಲ್ಲಿಯ 10 ವರ್ಷದ ಹನಮಂತ ಸೋಮಪ್ಪ ನಾಯ್ಕರ ಎಂಬ ಬಾಲಕ ಮೃತ ದೆರ್ದೈವಿ.
ಬಾಲಕ ಗುರುವಾರ (ದಿ 1) ತಮ್ಮ ಹಿತ್ತಲಲ್ಲಿ ಆಟ ಆದುತ್ತಿದ್ದ. ಆ ಸಮಯದಲ್ಲಿ ಬಾಲಕನಿಗೆ ಮುಂಗುಸಿ ಕಚ್ಚಿರುವುದಾಗಿ ಮನೆಯವರು ನೋಡಿದ್ದಾರೆ. ತಕ್ಷಣ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಇಂದು ಬೆಳಗಿನ ಜಾವ ಸಾವನಪ್ಪಿದ್ದಾನೆ.
ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಅವಿನಾಶ ಯರಗೊಪ್ಪ ಸಿಬ್ಬಂದಿ ಪ್ರಶಾಂತ ಅರೇರ ಸೇರಿದಂತೆ ಪರಿಶೀಲನೆ ಮಾಡಿ ತನಿಖೆ ನಡೆಸಿದರು.
ಬಾಲಕನಿಗೆ ಚಿಕಿತ್ಸೆ ನೀಡಿರುವ ವೈದ್ಯರು ಬಾಲಕ ಹಾವು ಕಚ್ಚಿದ್ದರಿಂದ ಸಾವನ್ನಪ್ಪಿದ್ದಾನೆ ಹೊರೆತು ಮುಂಗಿಸಿಯಿಂದಲ್ಲಾ ಎಂದು ಸ್ಪಷ್ಟ ಪಡಿಸಿರುವುದಾಗಿ ತಿಳಿದು ಬಂದಿದೆ.