ಬೆಳಗಾವಿ :
ಇಲ್ಲಿನ ಕಿವುಡ ಮಕ್ಕಳ ಸರಕಾರಿ ಶಾಲೆಗೆ ಪದವಿದರ ಸಹಾಯಕ ಶಿಕ್ಷಕರನ್ನು ಅಂಶಕಾಲಿಕವಾಗಿ ಮಾಸಿಕ ಗೌರವಧನ ಗರಿಷ್ಟ ರೂ: 6,000=00 (ಆರು ಸಾವಿರ ) ರಂತೆ ಭೋಧನೆ ಮಾಡಲು ಒಟ್ಟು 3 (ಮೂರು) ಅಭ್ಯರ್ಥಿಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಶ್ರವಣದೋಷವುಳ್ಳ ಮಕ್ಕಳಿಗೆ ಪಾಠ ಮಾಡಲು ವಿಶೇಷ ಶಿಕ್ಷಣ/ತರಬೇತಿ ಹೊಂದಿರುವವರಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಆಸಕ್ತರು ದಿನಾಂಕ: 30-05-2023 ರ ಒಳಗಾಗಿ “ಅಧೀಕ್ಷಕರು ಕಿವುಡ ಮಕ್ಕಳ ಸರಕಾರಿ ಶಾಲೆ ಅಜಮ ನಗರ, ವಿದ್ಯಾಗಿರಿ ಬೆಳಗಾವಿ-590010” ಇವರಿಗೆ ಅಗತ್ಯ ದೃಢೀಕೃತ ದಾಖಲಾತಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:-9901073686 ಅಥವಾ9663711081 ಸಂಪರ್ಕಿಸಬಹುದಾಗಿದೆ ಎಂದು ಕಿವುಡ ಮಕ್ಕಳ ಸರಕಾರಿ ಶಾಲೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.