ಬೆಳಗಾವಿ :
ಪಾಟೀಲ ಗಲ್ಲಿಯ ಶ್ರೀ ಶನಿ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಜಯಂತಿ ನಿಮಿತ್ತ ಮೇ 19 ರಂದು (ಶುಕ್ರವಾರ) ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಸೂರ್ಯೋದಯದಲ್ಲಿ ಶ್ರೀ ಶನಿ ಜನ್ಮೋತ್ಸವ ನಡೆಯಲಿದೆ. ನಂತರ ತೈಲಾಭಿಷೇಕ, ಶನಿಹೋಮ, ಶನಿಶಾಂತಿ, ಲಘುರುದ್ರಾಭಿಷೇಕ ಇತ್ಯಾದಿ ಆಯೋಜಿಸಲಾಗುವುದು. ದೇಗುಲದಲ್ಲಿ ದಿನವಿಡೀ ಪ್ರಸಾದ ವಿನಿಯೋಗ ನಡೆಯಲಿದೆ. ಭಕ್ತಾದಿಗಳು ದೇವರ ದರ್ಶನ ಪಡೆದು ತೀರ್ಥಪ್ರಸಾದದ ಸದುಪಯೋಗ ಪಡೆದುಕೊಳ್ಳುವಂತೆ ದೇವಸ್ಥಾನದ ಧರ್ಮದರ್ಶಿ ಪ್ರಕಾಶ ಅಧ್ಯಾಪಕ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನ ಅಥವಾ ಮೊಬೈಲ್ ಸಂಖ್ಯೆ 9731577287 ಅನ್ನು ಸಂಪರ್ಕಿಸಬಹುದು.