ಬೆಳಗಾವಿ :ವಿಧಾನಸಭಾ ಚುನಾವಣೆಗೆ ಚುನಾವಣಾ ಅಧಿಕಾರಿಗಳು ಹೊರಡಿಸಿರುವ ಪ್ರಕಟಣೆ ಇದೀಗ ಸರಕಾರಿ ನೌಕರರಿಗೆ ಗೊಂದಲ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಗೆ ಕಾರಣವಾಗಿದೆ. ಇದನ್ನು ಓದುಗರು ‘ಜನ ಜೀವಾಳ’ ಕ್ಕೆ ಹಂಚಿಕೊಂಡಿದ್ದಾರೆ. ಏನದು ಎಡವಟ್ಟು ನೋಡಿ.
ಇಂತಹ ಎಡವಟ್ಟಿಗೆ ಅಧಿಕಾರಿಗಳೇ ನೇರವಾಗಿ ಕಾರಣರಾಗಿದ್ದಾರೆ. ಇದರಿಂದಾಗಿ ಸಿಬ್ಬಂದಿಗಳು ಇದೀಗ ಚುನಾವಣಾ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಎಡವಟ್ಟು ಏನು !: ಕರ್ನಾಟಕ ವಿಧಾನಸಭೆಗೆ 2023 ರಲ್ಲಿ ಸಾರ್ವತ್ರಿಕ ಚುನಾವಣೆ ಸಲುವಾಗಿ ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಿಂದ ಅರಭಾವಿ, ಬೈಲಹೊಂಗಲ , ಗೋಕಾಕ , ಖಾನಾಪುರ, ಕಿತ್ತೂರು , ರಾಮದುರ್ಗ ಮತ್ತು ಸವದತ್ತಿ ಯಲ್ಲಮ್ಮ ತರಬೇತಿ ಕೇಂದ್ರಗಳಿಗೆ ದಿನಾಂಕ : 03-04-2023 ರಂದು ಬೆಳಗ್ಗೆ 5-30 ಕ್ಕೆ ವನಿತಾ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ , ಕ್ಲಬ್ ರೋಡ್ , ಬೆಳಗಾವಿಯಿಂದ ಬಸ್ಸುಗಳು ಹೊರಡುತ್ತಿದ್ದು , ಅದರ ಸದುಪಯೋಗವನ್ನು ಮತಗಟ್ಟೆ ಅಧಿಕಾರಿ / ಸಿಬ್ಬಂದಿಯವರುಗಳು ಪಡೆದುಕೊಳ್ಳಬೇಕೆಂದು ರಾಜಶೇಖರ ಡಂಬಳ, ಬೆಳಗಾವಿ ಗ್ರಾಮೀಣ ಚುನಾವಣಾಧಿಕಾರಿಗಳು ಹಾಗೂ ಆಯುಕ್ತರು, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ , ಬೆಳಗಾವಿ ಇವರು ತಿಳಿಸಿರುತ್ತಾರೆ.
ಈ ಪ್ರಕಟಣೆ ನೋಡಿದ ನೋಡಿದ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಹೌಹಾರುವಂತಾಗಿದೆ. ಇದೀಗ ಮೇ ತಿಂಗಳು ಜಾರಿಯಲ್ಲಿದೆ. ಆದರೆ ಪ್ರಕಟಣೆಯಲ್ಲಿ ಏಪ್ರಿಲ್ ತಿಂಗಳನ್ನು ನಮೂದಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಪ್ರಮುಖ ಸೂಚನೆ ನೀಡುವಾಗ ಹತ್ತಾರು ಸಲ ಅದರ ಮೇಲೆ ಕಣ್ಣಾಡಿಸಬೇಕು. ಆದರೆ ಚುನಾವಣಾ ಅಧಿಕಾರಿಗಳು ಆ ಬಗ್ಗೆ ದಿವ್ಯ ನಿರ್ಲಕ್ಷದ ವಹಿಸಿರುವುದು ಬೇಜವಾಬ್ದಾರಿಗೆ ಕಾರಣವಾಗಿದೆ. ಹೀಗೆಂದು ಚುನಾವಣಾ ಕರ್ತವ್ಯಕ್ಕೆ ಹೋಗುವ ಸಿಬ್ಬಂದಿಗಳು ಆಯಾ ವಾಟ್ಸಾಪ್ ಗ್ರೂಪ್ ಗಳಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ. ಇದು ಇದೀಗ ವಾಟ್ಸಪ್ ಗ್ರೂಪ್ ಗಳಲ್ಲಿ ವೈರಲ್ ಆಗಲು ಕಾರಣವಾಗಿದೆ. ಪತ್ರಿಕಾ ಪ್ರಕಟಣೆಗೆ ಸಹಿ ಮಾಡಿರುವ ಅಧಿಕಾರಿಯ ಜ್ಞಾನದ ಮಟ್ಟದ ಬಗ್ಗೆ ಇನ್ನಿಲ್ಲದಂತೆ ಕುಹಕವಾಡುತ್ತಿದ್ದಾರೆ.