ಬೆಳಗಾವಿ :ಬೆಳಗಾವಿಯಲ್ಲಿ ಶುಕ್ರವಾರ ಪ್ರಸಕ್ತ ವರ್ಷದ ಚೊಚ್ಚಲ ವರ್ಷಧಾರೆಯಿಂದ ಭೂಮಿ ತಂಪಾಯಿತು.ಮಧ್ಯಾಹ್ನ 3.45 ರ ನಂತರ ಆಕಾಶ ಕಾರ್ಮೋಡದಿಂದ ಕಪ್ಪುಗಟ್ಟಿತು. ಗುಡುಗು ಮಳೆಯಿಂದ ವರುಣ ಆರ್ಭಟ ಆರಂಭವಾಗಿದೆ.
ಬೇಸಿಗೆಯ ಬಿಸಿಲಿನಿಂದ ತತ್ತರಿಸಿದ್ದ ಜನ ಹಾಗೂ ಜಾನುವಾರುಗಳು ಮಳೆಯಿಂದ ತುಸು ತಂಪು ಕಂಡರು. ಬೇಸಿಗೆ ರಜೆಯ ಸವಿಯಲಿದ್ದ ಮಕ್ಕಳು ಮಳೆಯಲ್ಲೇ ನೆನೆದು ಖುಷಿ ಅನುಭವಿಸಿದರು. ಹಠಾತ್ ಮಳೆಯಿಂದ ನಗರಕ್ಕೆ ಬಂದಿದ್ದ ನಾಗರಿಕರು ಕೆಲ ಸಮಯ ಪರದಾಡುವಂತಾಯಿತು. ಒಟ್ಟಾರೆ, ಈ ಸಾಲಿನ ಬೇಸಿಗೆಯಲ್ಲಿ ಬಿದ್ದ ಚೊಚ್ಚಲ ಮಳೆಯಿಂದ ಜನ ಪುಳಕಿತಗೊಂಡರು.