ಬೆಳಗಾವಿ:ಸತತ ಅಧ್ಯಯನ ಮತ್ತು ಶ್ರಮದಿಂದಲೇ ಜೀವನದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯವೆಂದು ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ಬಿ. ದುಡಗುಂಟಿ ಅಭಿಪ್ರಾಯಪಟ್ಟರು.
ಕೆಎಲ್ ಇ ಶಿಕ್ಷಣ ಮಹಾವಿದ್ಯಾಲಯದ ಬಿ.ಇಎಡ್ ಪ್ರಶಿಕ್ಷಣಾರ್ಥಿ ವಿದ್ಯಾರ್ಥಿ ಒಕ್ಕೂಟದ ವಿವಿಧ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಡೆಬಿಡದೇ ನಿರಂತರ ಅಧ್ಯಯನ, ಅಧ್ಯಯನ ಮಾಡಿದ ಜ್ಞಾನವನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ಚರ್ಚಿಸಿದರೆ ಮಾತ್ರ ನಮ್ಮ ಜ್ಞಾನ ದ್ವಿಗುಣವಾಗುತ್ತದೆ. ಸರಳ ಸಜ್ಜನಿಕೆ, ನಯ-ವಿನಯತೆ, ಪ್ರಾಮಾಣಿಕತೆ ಇರಬೇಕು. ಜೀವನದುದ್ದಕ್ಕೂ ರಕ್ತಗತವಾಗಿ ಇಂತಹ ನಡವಳಿಕೆ ಅಳವಡಿಸಿಕೊಳ್ಳಬೇಕು ಎಂದರು.ಮಾನವ ಜೀವನಕ್ಕೆ ಜ್ಞಾನದಾಹವೂ ಎಲ್ಲಕ್ಕಿಂತ ಸರ್ವಶ್ರೇಷ್ಠ ಗಳಿಕೆ ಆಗಿದೆ ಎಂದರು.ಬಡತನ ಮತ್ತು ಕೊರತೆಯ ಜೀವನದಲ್ಲೇ ಬಹುದೊಡ್ಡ ಸಾಧನೆಗಳನ್ನು ಮಾಡಬಹುದು ಎಂದರು.
ಇದೇ ಸಂದರ್ಭದಲ್ಲಿ ಬೃಹತ್ ನಮ್ಮ ಪ್ರಜಾಪ್ರಭುತ್ವ ರಾಷ್ಟ್ರ, ಭಾರತದಲ್ಲಿ ವ್ಯವಸ್ಥಿತ ಚುನಾವಣಾ ಪ್ರಕ್ರಿಯೆಗಳು, ಪ್ರತಿ ನಾಗರಿಕರು ಮತದಾನ ಮಾಡಬೇಕಾದ ಅಗತ್ಯತೆ ಸೇರಿದಂತೆ ಇತರ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು. ಪ್ರಾಚಾರ್ಯ ಡಾ.ವಿ.ಪಿ. ಕುರಿ ಅಧ್ಯಕ್ಷತೆ ಮಾತನಾಡಿದರು. ಸುಜಾತಾ ಪೈ ಹಾಜರಿದ್ದರು. ಉಪನ್ಯಾಸಕಿ ಅನಿತಾ ದೊಡ್ಡಮನಿ ನಿರೂಪಿಸಿದರು. ಡಿ.ಕೆ. ಕುಲಕರ್ಣಿ ಪರಿಚಯಿಸಿದರು. ಎಸ್.ಕೆ.ತಳವಾರ ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಿನಿಧಿ ಎಸ್. ಎ. ಮುರಗೋಡ ವಂದಿಸಿದರು.