ಬೆಂಗಳೂರು:
ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಿಲ್ಲುತ್ತೇನೆ. ಅವರಿಗೆ ನನ್ನ ಬೆಂಬಲ ಇದೆ ಎಂದು ನಟ ಕಿಚ್ಚ ಸುದೀಪ್ ಹೇಳುವ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ. ನಾನು ಈಗ ಅವರನ್ನು ಬೆಂಬಲಿಸುತ್ತೇನೆ. ನಾನು ಅವರು ಹೇಳಿದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ, ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನ ಹೋಟೆಲ್ ಅಶೋಕದಲ್ಲಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಇಂದು, ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಿನಿಮಾಗೆ ಎಂಟ್ರಿ ಕೊಟ್ಟಾಗ ಯಾರೂ ಗಾಡ್ ಫಾದರ್ ಇರಲಿಲ್ಲ. ಕಷ್ಟದ ದಿನಗಳಲ್ಲಿ ಬೊಮ್ಮಾಯಿಯವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಇಲ್ಲಿ ರಾಜಕೀಯದ ಪ್ರಶ್ನೆ ಬರುವುದಿಲ್ಲ, ಬೊಮ್ಮಾಯಿ ಅವರನ್ನು ತಮ್ಮ ಗಾಡ್ ಫಾದರ್ ಎಂದು ಹೇಳಿದ ಅವರು, ನಾನು ಅವರನ್ನು ಬೆಂಬಲಿಸುತ್ತೇನೆ ಹಾಗೂ ಅವರು ಸೂಚಿಸುವ ಎಲ್ಲರಿಗೂ ಬೆಂಬಲ ನೀಡುತ್ತೇನೆ ಎಂದು ಅವರು ಹೇಳಿದರು.
ಕಷ್ಟದ ದಿನಗಳಲ್ಲಿ ಬೆಂಬಲಕ್ಕೆ ಕೆಲವರ ಪೈಕಿ ಬಸವರಾಜ ಬೊಮ್ಮಾಯಿ ಅವರು ಒಬ್ಬರು ಸುದೀಪ್ ಹೇಳಿದ್ದಾರೆ. ಪ್ರಚಾರಕ್ಕೆ ಎಲ್ಲ ಕಡೆ ಹೋಗಲು ಆಗಲ್ಲ. ಬೊಮ್ಮಾಯಿ ಅವರು ಇಂಥಲ್ಲಿ ಪ್ರಚೃ ಮಾಡಿ ಎಂದರೆ ಮಾಡುತ್ತೇನೆ. ಎಲ್ಲರನ್ನೂ ಮೆಚ್ವಿಸುವ ಉದ್ದೇಶವಿದ್ದರೆ ಇಲ್ಲಿ ಬರುತ್ತಿರಲಿಲ್ಲ. ಬಸವರಾಜ ಬೊಮ್ಮಾಯಿ ಯಾವ ಪಕ್ಷದಲ್ಲಿ ಇದ್ದರೂ ಅವರ ಪರವಾಗಿ ನಿಲ್ಲುತ್ತಿದ್ದೆ. ನನ್ನ ಕಷ್ಟದ ದಿನಗಳಲ್ಲಿ ಯಾರಾದರೂ ನನ್ನ ಪರವಾಗಿ ನಿಂತಿದ್ದರೆ ನಾನು ಅವರ ಪರವಾಗಿ ನಿಲ್ಲುತ್ತಿದ್ದೆ ಎಂದು ಅವರು ತಿಳಿಸಿದರು.
ನಾನು ಚುನಾವಣೆಗೆ ನಿಲ್ಲುತ್ತಿಲ್ಲ, ಎಂದು ಸ್ಪಷ್ಟಪಡಿಸಿದ ಸುದೀಪ್ ಅವರು, ಬಸವರಾಜ ಬೊಮ್ಮಾಯಿ ಅವರಿಗೆ ಬೇಕಾದ ವ್ಯಕ್ತಿಗಳ ಪರವಾಗಿ ಅವರು ಹೇಳಿದರೆ ಪ್ರಚಾರ ನಡೆಸುತ್ತೇನೆ. ನಾನು ವ್ಯಕ್ತಿಗೆ ಬೆಂಬಲ ನೀಡುತ್ತಿದ್ದೇನೆಯೇ ಹೊರತು ಪಕ್ಷಕ್ಕಲ್ಲ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಮಾಧ್ಯಮಗಳಲ್ಲಿ ಬಂದ ಸುದ್ದಿ ಸತ್ಯವಾಗಿದೆ. ಕಿಚ್ಚ ಸುದೀಪ್ ಜೊತೆಗೆ ಆತ್ಮೀಯ ಸ್ನೇಹವಿದೆ. ಅವರು ತಮ್ಮ ನಿಲುವನ್ನು ಪ್ರಕಟ ಮಾಡುತ್ತಾರೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಸುದೀಪ್ ರಾಜಕಾರಣದಲ್ಲಿ ಇಲ್ಲ, ಎಲ್ಲರಿಗೂ ಬೇಕಾದವರು ಆಗಿದ್ದಾರೆ ಎಂದರು.
ಕಿಚ್ಚ ಸುದೀಪ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ, ತನಗೆ ಮತ್ತು ತಾನು ಇರುವ ಪಕ್ಷವನ್ನು ಬೆಂಬಲಿಸಲು ಬಂದಿದ್ದಾರೆ. ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು. ಸುದೀಪ್ ಹಾಗೂ ನನ್ನ ಸಂಬಂಧಕ್ಕೆ ಗೌರವ ಕೊಡಿ. ಅವರ ಬಳಿ ಮಾತುಕತೆ ನಡೆಸಿದ್ದೇನೆ. ಪಕ್ಷಕ್ಕೆ ಸೇರ್ಪಡೆ ಆಗದೇ ಇದ್ದರೂ ಪಕ್ಷಕ್ಕೆ ಪ್ರಚಾರದ ಅಗತ್ಯ ಇದೆ. ನಿಮಗಾಗಿ ಪ್ರಚಾರ ಮಾಡಲು ತಯಾರಿದ್ದೇನೆ ಅವರು ಹೇಳಿದರು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.