ಬೆಂಗಳೂರು :ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಭಾಷಾವಿಷಯದ ವಿದ್ಯಾರ್ಥಿಗಳಿಗೆ ಶೇಕಡಾ 10 ಮತ್ತು ಐಚ್ಛಿಕ ವಿಷಯಗಳಿಗೆ ಶೇಕಡ 8ರಷ್ಟು ಕೃಪಾಕ ನೀಡಲು ರಾಜ್ಯ ಶಾಲಾ ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಕರೋನಾ ಸಂದರ್ಭದಲ್ಲಿ ಇಂಥ ಕೃಪಾಂಕ ನೀಡಲಾಗಿತ್ತು. ಕಲಿಕೆಯಲ್ಲಿ ವಿದ್ಯಾರ್ಥಿಗಳು ಹಿಂದುಳಿದಿರುವ ಬಗ್ಗೆ ಶಿಕ್ಷಕರು ನೀಡಿರುವ ಅಭಿಪ್ರಾಯ ಗಮನಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.625 ಅಂಕಕ್ಕೆ 219 ಅಂಕ ಪಡೆದು ವಿದ್ಯಾರ್ಥಿ ಅನುತ್ತೀರ್ಣನಾಗಿದ್ದರೆ ಆತನನ್ನು ಕ್ರಪಾಂಕದ ಮೂಲಕ ಪಾಸ್ ಮಾಡಲಾಗುತ್ತದೆ.