ಬೆಂಗಳೂರು :ಇಂದಿನ ಕಾಲಮಾನದಲ್ಲಿ ವಾಟ್ಸಾಪ್ ನೋಡದೆ ದಿನ ಕಳೆಯುವಂತಾಗದು ಎಂಬ ಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ವಾಟ್ಸಾಪ್ ದಿನೇ ದಿನೇ ನಾವೀನ್ಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಇದು ವಾಟ್ಸಾಪ್ ಬಳಕೆದಾರರ ಪಾಲಿಗೆ ಇನ್ನಷ್ಟು ಸಂತಸದ ಸುದ್ದಿಯಾಗಿದೆ. ಇಂದಿನ ಕಾಲಮಾನದಲ್ಲಿ ವಾಟ್ಸಾಪ್ ಬೇಕೇ ಬೇಕು ಎಂಬ ಅನಿವಾರ್ಯ ಪರಿಸ್ಥಿತಿ ಇಂದು ಎಲ್ಲರಿಗೂ ಸೃಷ್ಟಿಯಾಗಿದೆ. ಅಷ್ಟೊಂದು ಪರಿಣಾಮಕಾರಿ ರೀತಿಯಲ್ಲಿ ವಾಟ್ಸಪ್ ಎಲ್ಲಾ ವರ್ಗದ ಜನರನ್ನು ತನ್ನತ್ತ ಸೆಳೆದಿದೆ.
ಜಗತ್ತಿನ ಅತ್ಯಂತ ಜನಪ್ರಿಯ ಸಾಮಾಜಿಕ ತಾಣವೆನಿಸಿದ ಮೆಸೇಜಿಂಗ್ ಅಪ್ಲಿಕೇಶನ್ ‘ವಾಟ್ಸಾಪ್’ ಈಗಾಗಲೇ ತನ್ನ ಬಳಕೆದಾರರಿಗೆ ಹಲವಾರು ವೈಶಿಷ್ಟ್ಯತೆಗಳನ್ನು ಪರಿಚಯಿಸಿದೆ. ಈಗಲೂ ಹೊಸ ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿದ್ದು ಬಳಕೆದಾರರ ಸ್ನೇಹಿಯಾಗಿದೆ.ಇದೀಗ ಮತ್ತೊಂದು ಹೊಸ ಫೀಚರ್ ಪರಿಚಯಿಸಲು ವಾಟ್ಸಾಪ್ ಮುಂದಾಗಿದೆ.
ಬಳಕೆದಾರರು ತಮ್ಮ ಚಾಟ್ ಮೆಸೇಜ್ ಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳಬಹುದಾಗಿದೆ. ಸಈ ಫೀಚರ್ ಅಳವಡಿಸಿದ್ದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಚಾಟ್ ಗಳನ್ನು ಲಾಕ್ ಮಾಡಿ ಇತರರಿಗೆ ಕಾಣಿಸದಂತೆ ಸಂರಕ್ಷಣೆ ಮಾಡಿ ಇಟ್ಟುಕೊಳ್ಳಬಹುದಾಗಿದೆ. ಫಿಂಗರ್ ಪ್ರಿಂಟ್ ಮತ್ತು ಪಾಸ್ ಕೋಡ್ ಸೌಲಭ್ಯ ನೀಡಲಾಗುತ್ತದೆ. ಒಟ್ಟಾರೆ ವಾಟ್ಸಪ್ ಹೊಸ ಹೊಸ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಿರುವುದು ವಿಶೇಷವಾಗಿದೆ.