ಬೆಂಗಳೂರು :
ನೆಲಮಂಗಲ ಸಮೀಪದ ಗೋಲ್ಡನ್ ಪಾಮ್ಸ್ ರೆಸಾರ್ಟ್ ನಲ್ಲಿ ಭಾನುವಾರ ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಯಿತು. ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರ ನೇತೃತ್ವದಲ್ಲಿ ರಾಜ್ಯದ 110 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 15 ಜಿಲ್ಲೆಗಳಾದ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಬೀದರ್, ಕಲಬುರ್ಗಿ, ಯಾದಗಿರಿ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ, ಬೆಂಗಳೂರು ನಗರ ಜಿಲ್ಲೆಗಳ ಕೋರ್ ಕಮಿಟಿ ಸಭೆ ನಡೆಯಿತು. ಸದಸ್ಯರಿಂದ ಅಭಿಪ್ರಾಯ ಸಲ್ಲಿಕೆ ನಡೆಯಿತು.
ಬೆಂಗಳೂರಿನಲ್ಲಿ ಯಾವ ಕ್ಷೇತ್ರದಲ್ಲಿ ಟಿಕೆಟ್ ಫೈಟ್ ಇದೆ:
ಜಯನಗರ, ಗೋವಿಂದ ರಾಜ್ ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ವಿಜಯನಗರ , ಬ್ಯಾಟರಾಯನ ಪುರ ಇಷ್ಟು ಕ್ಷೇತ್ರದಲ್ಲಿ ಟಿಕೆಟ್ ಫೈಟ್ ಇದೆ. ಎರಡು ಮೂರು ಆಕಾಂಕ್ಷಿಗಳು ಇದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ:
ಕಾಪು ಕ್ಷೇತ್ರ, ಲಾಲಾಜಿ ಮೆಂಡನ್ ಗೆ ಟಿಕೆಟ್ ನೀಡಬೇಕಾ ಬೇಡವಾ?
ಮೂಡಬಿದ್ರೆ – ಉಮಾನಾಥ್ ಕೋಟ್ಯಾನ್ vs ಸುಧೀರ್ ಶೆಟ್ಟಿ
ಪುತ್ತೂರು – ಸಂಜೀವ ಮಠಂದೂರು vs ಸ್ಥಳಿಯ ನಾಯಕರ ನಡುವೆ ವೈಮನಸ್ಸು
ಸುಳ್ಯ – ಅಂಗಾರಗೆ ಟಿಕೆಟ್ ನೀಡಬೇಕಾ ಬೇಡವಾ?
ಬೈಂದೂರು – ಸುಕುಮಾರ್ ಶೆಟ್ಟಿಗೆ ಟಿಕೆಟ್ ನೀಡುವ ಬಗ್ಗೆ ಸ್ಥಳೀಯವಾಗಿ ಗೊಂದಲ ಇದೆ. ಈ ವಿಚಾರಗಳ ಚರ್ಚೆ ನಡೆಯಿತು.
ಉತ್ತರ ಕನ್ನಡ: ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಸಿಗುವ ಸಾಧ್ಯತೆ
ಕುಮಟಾ – ದಿನಕರ ಶೆಟ್ಟಿ
ಭಟ್ಕಳ – ಸುನೀಲ್ ನಾಯ್ಕ್
ಕಾರವಾರ – ರೂಪಾಲಿ ನಾಯ್ಕ್
ಶಿರಸಿ – ಕಾಗೇರಿ
ಯಲ್ಲಾಪುರ – ಶಿವರಾಮ್ ಹೆಬ್ಬಾರ್
ಹಳಿಯಾಳ – ಸುನೀಲ್ ಹೆಗಡೆ ಆಕಾಂಕ್ಷಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ :
ಹೊಸಕೋಟೆ ಕ್ಷೇತ್ರದಲ್ಲಿ ಪುತ್ರ ನಿತೀಶ್ ಪುರುಷೊತ್ತಮ್ ಗೆ ಟಿಕೆಟ್ ಕೇಳಿದ ಎಂಟಿಬಿ ನಾಗರಾಜು.
ಹೊಸಕೋಟೆಗೆ ಎಂಟಿಬಿ, ಪುತ್ರ ನಿತೀಶ್ – ಎರಡೂ ಹೆಸರುಗಳನ್ನು ಕಳಿಸಲು ನಿರ್ಧರಿಸಿರುವ ರಾಜ್ಯ ನಾಯಕರು.
ಹೊಸಕೋಟೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ನಿರ್ಣಯಕ್ಕೆ ಬಿಡಲಿರುವ ರಾಜ್ಯ ನಾಯಕರು.
ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿ ಧೀರಜ್ ಮುನಿರಾಜುಗೆ ಟಿಕೆಟ್ ಬಹುತೇಕ ಫಿಕ್ಸ್
ಕಳೆದ ವರ್ಷ ಚಿಕ್ಕಬಳ್ಳಾಪುರ ಜನಸ್ಪಂದನ ಸಮಾವೇಶದ ಆಯೋಜನೆಯ ಹೊಣೆಯನ್ನು ಸಚಿವ ಸುಧಾಕರ್ ಜತೆಗೂಡಿ ಹೊತ್ತಿದ್ದ ಧೀರಜ್ ಮುನಿರಾಜು
ಆಗ ಧೀರಜ್ ನಿವಾಸಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಯಡಿಯೂರಪ್ಪ, ಸಿಎಂ, ಕಟೀಲ್ ಭೇಟಿ ಕೊಟ್ಟಿದ್ದರು.
ಬಿ.ಎಲ್. ಸಂತೋಷ್ ಸಹ ಧೀರಜ್ ನಿವಾಸಕ್ಕೆ ಭೇಟಿ ಕೊಟ್ಟಿದ್ರು
ದೇವನಹಳ್ಳಿ ಕ್ಷೇತ್ರದಲ್ಲಿ ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪಗೆ ಟಿಕೆಟ್ ಫಿಕ್ಸ್.
ಜೆಡಿಎಸ್ ತೊರೆದು ಬಿಜೆಪಿಗೆ ಬಂದಿರುವ ಪಿಳ್ಳ ಮುನಿಶಾಮಪ್ಪ
ನೆಲಮಂಗಲ ಕ್ಷೇತ್ರದಲ್ಲಿ ಆಕಾಂಕ್ಷಿ ಸಪ್ತಗಿರಿ ಶಂಕರ್ ನಾಯಕ್ ಗೆ ಟಿಕೆಟ್ ಸಾಧ್ಯತೆ.
ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿರುವ ಸಪ್ತಗಿರಿ ಶಂಕರ್ ನಾಯಕ್
ರೆಸಾರ್ಟ್ ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದ್ದ ವೇಳೆ, ತೇರದಾಳ ಕ್ಷೇತ್ರಕ್ಕೆ ನೇಕಾರ ಸಮುದಾಯದವರಿಗೆ ಟಿಕೆಟ್ ಗೆ ಆಗ್ರಹಿಸಿ ನೇಕಾರ ಸಮುದಾಯದ ಬಿಜೆಪಿ ಕಾರ್ಯಕರ್ತರು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು. ಬಿಜೆಪಿಗೆ ಜೈಕಾರ ಘೋಷಣೆ ಹಾಕಿ ಸಾಮಾಜಿಕ ನ್ಯಾಯದಡಿ ನೇಕಾರರಿಗೆ ಟಿಕೆಟ್ ಕೊಡುವಂತೆ ಆಗ್ರಹಿಸಿದರು.
ಚಿತ್ತಾಪುರ ಕ್ಷೇತ್ರದ ಇಬ್ಬರು ಆಕಾಂಕ್ಷಿಗಳ ಬಣಗಳಿಂದ ಟಿಕೆಟ್ ಗೆ ಆಗ್ರಹ. ಚಿತ್ತಾಪುರ ಕ್ಷೇತ್ರದ ಆಕಾಂಕ್ಷಿ ವಿಠಲ್ ವಾಲ್ಮೀಕಿ ನಾಯಕ್ ಮತ್ತು ಮಣಿಕಂಠ ರಾಥೋಡ್ ಬೆಂಬಲಿಗರಿಂದ ಪ್ರತ್ಯೇಕವಾಗಿ ಆಗ್ರಹ. ರೆಸಾರ್ಟ್ ಎದುರು ಎರಡೂ ಬಣದವರು ಜಮಾವಣೆಯಾಗಿದ್ದರು.
ಶಿವರಾಮೆ ಗೌಡ ಬಿಜೆಪಿಗೆ:
ಬಿಜೆಪಿ ಕೋರ್ ಕಮಿಟಿ ವೇಳೆ ಎಲ್. ಆರ್. ಶಿವರಾಮೇಗೌಡ ಗೋಲ್ಡನ್ ಫಾರ್ಮ್ ರೆಸಾರ್ಟ್ ಗೆ ಆಗಮಿಸಿದರು. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಬಲ ನೀಡುವ ಪ್ರಯತ್ನದ ಭಾಗವಾಗಿ ಶಿವರಾಮೇ ಗೌಡರನ್ನು ಬಿಜೆಪಿಗೆ ಕರೆತಂದಿದೆ.
ಈಗ ಶಿವರಾಮೇ ಗೌಡ ಮತ್ತು ಫೈಟರ್ ರವಿ ನಡುವೆ ಟಿಕೆಟ್ ಯಾರಿಗೆ ಎಂಬ ಪ್ರಶ್ನೆ ಎದ್ದಿದೆ. ಇಬ್ಬರು ನಾಗಮಂಗಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಪಾರ್ಟಿ ಇನ್ನು ಶಿವರಾಮೇ ಗೌಡರ ನಡೆ ಏನು ಗಮನಿಸಬೇಕು.