ಜನ ಜೀವಾಳ ಜಾಲ: ಬೆಳಗಾವಿ : ಬಿಜೆಪಿ ಸರ್ಕಾರ ಸ್ವತಂತ್ರ ಸಂಸ್ಥೆಗಳ ಮೂಲಕ ಬೆಳಗಾವಿ ಜಿಲ್ಲೆಯ ಮೂವರು ಅಭ್ಯರ್ಥಿಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಇದರಲ್ಲಿ ನನ್ನ ಹೆಸರೂ ಇದೆ. ಈ ಮೂಲಕ ನಮ್ಮ ಮುಖಂಡರ ಶಕ್ತಿಯನ್ನು ತಡೆಯುವ ಯತ್ನ ನಡೆದಿದೆ ಎಂದು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಇನ್ನು ೧೦ ದಿನ ಬಾಕಿ ಇರುವಾಗಲೇ ೫೦ ವಿವಿಧ ಪಕ್ಷಗಳ ರಾಜಕೀಯ ಅಭ್ಯರ್ಥಿಗಳ ಮೇಲೆ ದಾಳಿ ಮಾಡುವ ಹುನ್ನಾರ ನಡೆದಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂರು ಜನರ ಮೇಲೆ ದಾಳಿ ಮಾಡಲು ಟಾರ್ಗೆಟ್ ಮಾಡಲಾಗಿದೆ. ಈ ಮೂಲಕ ಜನರ ಭಾವನೆಯನ್ನು ಕಲುಕಲು ಬಿಜೆಪಿ ಹೊರಟಿದೆ ಎಂದು ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ವಿರೋಧ ಪಕ್ಷದ ಮೇಲೆ ಸಂಸ್ಥೆಗಳ ಮೂಲಕ ದುರ್ಬಳಕೆ ಮಾಡುವುದನ್ನು ಬಿಡಬೇಕು ಎಂದರು.
ಬಿಜೆಪಿಯವರು ಹತಾಶೆಗೊಂಡಿದ್ದಾರೆ. ವಾಮಮಾರ್ಗದಿಂದ ಲೋಕಾಯುಕ್ತ ಹಾಗೂ IT ದಾಳಿ ಮಾಡುವ ಸಂಚು ಸರಿಯಲ್ಲ ಎಂದರು.
ಸಾರ್ವತ್ರಿಕ ಚುನಾವಣೆ ೧೦ದಿನ ಉಳಿದಿದೆ. ಕಾಂಗ್ರೆಸ್ ಅಲೆ ರಾಜ್ಯದಲ್ಲಿ ಇದೆ. ನಮ್ಮ ಸರಕಾರ ತರಲು ಜನ ಮನಸ್ಸು ಮಾಡಿದ್ದು ಜಿಲ್ಲೆಯಾದ್ಯಂತ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ಯಾರಂಟಿ ಯೋಜನೆ ಮೇಲೆ ಜನ ಭರವಸೆ ವ್ಯಕ್ತವಾಗಿವೆ. ಜನಪ್ರಿಯ ಯೋಜನೆಗಳನ್ನು ಜನ ಕಾಯುತ್ತಿದ್ದು, ಪ್ರತಿ ಕ್ಷಣ ಮಹತ್ವದ್ದು ರಾಜ್ಯದಲ್ಲಿ ವಾಮ ಮಾರ್ಗದಿಂದ ವಿರೋಧ ಪಕ್ಷಗಳನ್ನು ಹೆದರಿಸುವ ಆಲೋಚನೆ ಮಾಡುವುದು ಅವರಿಗೆ ರಿರ್ವಸ್ ಆಗಲಿದೆ. ಸತ್ಯ ನ್ಯಾಯ ಮಾರ್ಗದಿಂದ ಚುನಾವಣೆ ಎದುರಿಸಬೇಕಿದೆ
ಎಂದು ಹೇಳಿದರು. ಒತ್ತಡ ರಹಿತ ಚುನಾವಣೆಯನ್ನು ಮಾಡಲಾಗುತ್ತಿದೆ. ೫೦ ಜನರ ಮೇಲೆ ದಾಳಿ ಮಾಡುವ ಹುನ್ನಾರ ನಡೆದಿದೆ. ಬೆಳಗಾವಿ ಜಿಲ್ಲೆಯ ಮೂರು ಜನರ ಮೇಲೆ ದಾಳಿ ಮಾಡಲು ಟಾರ್ಗೆಟ್ ಮಾಡಲಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಈ ರೀತಿಯ ತಂತ್ರಗಳನ್ನು ಮಾಡುವ ಹುನ್ನಾರ ಬಿಜೆಪಿ ಮಾಡುತ್ತಿದೆ ಎಂದು ಆರೋಪಗಳ ಸುರಿಮಳೆಗೈದರು.
ನಾವು ಯಾವುದೇ ತಪ್ಪು ಮಾಡಿಲ್ಲ. ಚುನಾವಣೆ ಕೇವಲ 10 ದಿನ ಮಾತ್ರ ಇದೆ. ಇಂಥ ಸಮಯ ಕಡಿಮೆ ಇದ್ದ ಸಂದರ್ಭದಲ್ಲಿ ಕಾರ್ಯಕರ್ತರು, ಜನರು ಗೊಂದಲಕ್ಕೆ ಇಡಾಗುವ ಪರಿಸ್ಥಿತಿ ತರುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಚುನಾವಣೆಯ ಬಂದಾಗ ವಿರೋಧ ಪಕ್ಷದವರನ್ನು, ಮತದಾರರನ್ನು ಬೇರೆ ಕಡೆ ಗಮನ ಹರಿಸುವುದು ಹವ್ಯಾಸವಾಗಿದೆ. ಸಮಯ ಬಹಳ ಮುಖ್ಯವಾಗಿದೆ. ಕೊನೆಯ ಹಂತದ ಪ್ರಚಾರದ ಸಂದರ್ಭದಲ್ಲಿ ಇಂಥ ಮಾರ್ಗವನ್ನು ಬಿಜೆಪಿ ಕೈ ಬಿಡಬೇಕು ಎಂದು ತಿಳಿಸಿದರು.
ನಾನು ಒಬ್ಬ ರಾಜ್ಯದ ಕಾಂಗ್ರೆಸ್ ವಕ್ತಾರೆ. ಸುಮಾರು 50 ಜನರಲ್ಲಿ ನನ್ನ ಮೇಲೂ ದಾಳಿ ಮಾಡುವ ಮಾಹಿತಿ ಇದೆ. ನನ್ನ ಸೋಲಿಸುವುದು, ಗೆಲ್ಲಿಸುವುದು ಗ್ರಾಮೀಣ ಮತಕ್ಷೇತ್ರದ ಜನ. ಕಾರ್ಯಕರ್ತರು ಗೊಂದಲಕ್ಕೆ ಈಡಾಗುತ್ತಾರೆ. ಅಷ್ಟೆ ನನ್ನ ಕ್ಷೇತ್ರದ ಮೇಲೆ ಯಾವುದೇ ಮೇಲೆ ಪರಿಣಾಮ ಬಿರುವುದಿಲ್ಲ ಎಂದರು.
ಕರ್ನಾಟಕದಲ್ಲಿ ಈ ಬಾರಿ ಎಲ್ಲ ಕಡೆ ಕಾಂಗ್ರೆಸ್ ಪರವಾದ ವಾತಾವರಣ, ಅಲೆ ಜನಸಾಮಾನ್ಯರಿಂದ ಕೇಳಿ ಬರುತ್ತಿದೆ. ರಾಜ್ಯದ ಮತದಾರರು ಕಾಂಗ್ರೆಸ್ ಸರಕಾರ ರಚನೆ ಮಾಡುವ ಮನಸ್ಸು ಮಾಡಿದ್ದಾರೆ ಎಂದು ಎನ್ನಿಸುತ್ತಿದೆ.