ಬೆಳಗಾವಿ: ಕಿತ್ತೂರಿನ ಕಾಂಗ್ರೆಸ್ ನ ಹಿರಿಯ ಮುಖಂಡ ಮಾಜಿ ಸಚಿವ, ಕಿತ್ತೂರಿನ ಧಣಿ ಎಂದೇ ಖ್ಯಾತರಾಗಿದ್ದ ಡಿ.ಬಿ. ಇನಾಮದಾರ (74) ಅವರು ಮಂಗಳವಾರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮಾಜಿ ಸಚಿವರಾದ ಡಿ ಬಿ ಇನಾಮದಾರ ಅವರು ನಡೆದು ಬಂದ ದಾರಿ.
ಜನನ 02/07/1950
ಪ್ರಥಮ ಬಾರಿ 1983ರಲ್ಲಿ ಶಾಸಕರಾಗಿ ಆಯ್ಕೆ,
2ನೇಯ ಬಾರಿ 1985
3ನೇಯ ಬಾರಿ 1994
4ನೇಯ ಬಾರಿ 1999
5ನೇಯ ಬಾರಿ 2013
ಒಟ್ಟು ಐದು ಸಲ ಶಾಸಕರಾಗಿ ಆಯ್ಕೆಯಾಗಿರುತ್ತಾರೆ.
ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಮೊದಲನೇ ಸಲ 1983ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿ ಎರಡನೇ ಸಲ 1985ರಲ್ಲಿ ಆರೋಗ್ಯ ಸಚಿವರಾಗಿ ಮೂರನೇ ಸಲ 1987ರಲ್ಲಿ ಅಬಕಾರಿ ಸಚಿವರಾಗಿ ಸಂಪುಟ ದರ್ಜೆ ಸಚಿವರಾಗಿ ಸೇವೆ ಸಲ್ಲಿಸಿರುತ್ತಾರೆ. ತದನಂತರದಲ್ಲಿ 1999 ರಲ್ಲಿ ಎಸ್ಎಂ ಕೃಷ್ಣ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು. 2000ರಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ. ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸಿರುತ್ತಾರೆ.
ಡಿ.ಬಿ.ಇನಾಮದಾರ್ ಅವರು 1983ರಲ್ಲಿ ಜನತಾ ಪಕ್ಷದಿಂದ ಕಿತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಸಲ ಗೆಲುವು ದಾಖಲಿಸಿದ್ದರು. 1994 ರಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿ ಇಂದಿನವರೆಗೂ ಕಾಂಗ್ರೆಸ್ನಲ್ಲಿದ್ದರು. ಒಟ್ಟು 9 ಚುನಾವಣೆಗಳನ್ನು ಎದುರಿಸಿ ೫ ಚುನಾವಣೆಗಳಲ್ಲಿ ಗೆಲುವು ದಾಖಲಿಸಿದ್ದರು. ದೇವರಾಜ ಅರಸ, ಎಸ್.ಎಂ ಕೃಷ್ಣಾ, ಎಸ್. ಬಂಗಾರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದರು. 1983, 1985 ರಲ್ಲಿ ಜನತಾ ಪಕ್ಷದಿಂದ, 1994, 1999, 2013ರ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. 1989, 2004, 2008 ಹಾಗೂ 2018 ರಲ್ಲಿ ಸೋಲು ಕಂಡಿದ್ದರು.
2023 ರ ಚುನಾವಣೆಯಲ್ಲಿ ಕಿತ್ತೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿ.ಬಿ ಇನಾಮದಾರ್ ಅವರಿಗೆ ಅನಾರೋಗ್ಯ ಕಾರಣಕ್ಕೆ ಇನಾಮದಾರ್ ಬದಲು ಅಳಿಯ ಬಾಬಾಸಾಹೇಬ್ ಪಾಟೀಲಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.