ತಿರುವನಂತಪುರ :
ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮಾಹುತಿ ದಾಳಿ ಮೂಲಕ ಹತ್ಯೆ ಮಾಡುವ ಬಗ್ಗೆ ಉಗ್ರಗಾಮಿ ಸಂಘಟನೆಗಳ ಬೆದರಿಕೆ ಹಿನ್ನೆಲೆಯಲ್ಲಿ ಕೇರಳದಲ್ಲಿ ಇದೀಗ ಹೈ ಅಲರ್ಟ್ ಘೋಷಿಸಲಾಗಿದೆ. ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಕಚೇರಿಗೆ ಅನಾಮಿಕ ವ್ಯಕ್ತಿಯ ಹೆಸರಿನಲ್ಲಿ ಬೆದರಿಕೆ ಪತ್ರ ರವಾನೆಯಾಗಿದೆ. ಎಪ್ರಿಲ್ 24ರಂದು ಪ್ರಧಾನಿ ಮೋದಿ ವಂದೇ ಭಾರತ ರೈಲಿಗೆ ಚಾಲನೆ ನೀಡಲು ಕೊಚ್ಚಿಗೆ ಆಗಮಿಸಲಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದಂತೆ ಆತ್ಮಾಹುತಿ ಬಾಂಬರ್ ಮೂಲಕ
ಹತ್ಯೆ ಮಾಡಲಾಗುವುದು ಎಂಬ ಅಂಶ ಪತ್ರದಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ನಡುವೆ ರಾಜ್ಯ ಪೊಲೀಸರಿಂದ ಗಂಭೀರ ಭದ್ರತಾ ಲೋಪವಾಗಿರುವುದು ಸಹ ಬೆಳಕಿಗೆ ಬಂದಿದೆ. ಗುಪ್ತಚರ ಸಂಸ್ಥೆಗಳು ತನಿಖೆ ತೀವ್ರಗೊಳಿಸಿವೆ.