ಬೆಂಗಳೂರು:
2022-23ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಈ ಸಲ ಬೆಳಗಾವಿ ಜಿಲ್ಲೆ 25 ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದು ಜಿಲ್ಲೆಯ ಶೈಕ್ಷಣಿಕ ಹಿನ್ನಡೆಯನ್ನು ಎತ್ತಿ ತೋರಿಸಿದೆ. ರಾಜ್ಯದ ಒಟ್ಟು 32 ಜಿಲ್ಲೆಗಳಲ್ಲಿ ಬೆಳಗಾವಿಯ ಈ ಕಳಪೆ ಸಾಧನೆ ಶಿಕ್ಷಣ ಪ್ರೇಮಿಗಳಿಗೆ ಆತಂಕ ಮಾಡಿಸಿದೆ.
ರಾಜ್ಯದಲ್ಲಿ ಈ ಬಾರಿ ಒಟ್ಟು
7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 524209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 80.72 ವಿದ್ಯಾರ್ಥಿನಿಯರು ಹಾಗೂ ಬಾಲಕರು ಶೇ 69.05 ಸಾಧಿಸಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ ಈ ಬಾರಿ ಇದೇ ಮೊದಲ ಬಾರಿ ಶೇ 74.67 ಫಲಿತಾಂಶ ಲಭ್ಯವಾಗಿದೆ.
ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ
https://karresults.nic.in
ಶೇ. 74.64 ಮಂದಿ ಉತ್ತೀರ್ಣ :
ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಇಂದು(ಏಪ್ರಿಲ್ 21) ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶ ಬಿಡುಗಡೆ ಮಾಡಿದ್ದು, ಶೇ. 74.64ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.
ಕಲಾ ವಿಭಾಗದಲ್ಲಿ ಜಯನಗರ NMKRV ಕಾಲೇಜು ವಿದ್ಯಾರ್ಥಿನಿ ಥಬಸುಮ್ ಶೇಖ್ 600ಕ್ಕೆ 593 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಇಬ್ಬರು ಹಂಚಿಕೊಂಡಿದ್ದಾರೆ. ಕೋಲಾರದ ಶ್ರೀನಿವಾಸಪುರದ ಗಂಗೋತ್ರಿ ಪಿಯು ಕಾಲೇಜಿನ ವಿದ್ಯಾರ್ಥಿ ಎಸ್.ಎಂ.ಕೌಶಿಕ್ ಹಾಗೂ ಬೆಂಗಳೂರಿನ ಜಯನಗರದ ಆರ್. ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ಸುರಭಿ ಎಸ್ ಇಬ್ಬರೂ 596 ಅಂಕಗಳನ್ನು ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಪರೀಕ್ಷೆಗೆ ಕುಳಿತ ಒಟ್ಟು 7,26,195 ವಿದ್ಯಾರ್ಥಿಗಳ ಪೈಕಿ 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ1,34,876 ಶ್ರ( ಶೇಕಡಾ 61.22ರಷ್ಟು) ವಿದ್ಯಾರ್ಥಿ ಪಾಸ್ ಆಗಿದ್ದರೆ, ವಾಣಿಜ್ಯ ವಿಭಾಗದಲ್ಲಿ 1,82,246 (ಶೇಕಡಾ 75.89ರಷ್ಟು) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2,07,087 (ಶೇಕಡಾ 85.71ರಷ್ಟು) ಉತ್ತೀರ್ಣರಾಗಿದ್ದಾರೆ.
ಉತ್ತಮ ಸಾಧನೆ ಮಾಡಿದ ಜಿಲ್ಲೆಗಳು..
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ 2ನೇ ಸ್ಥಾನ, ಕೊಡಗು ಜಿಲ್ಲೆಗೆ 3ನೇ ಸ್ಥಾನ ಹಾಗೂ ಉತ್ತರ ಕನ್ನಡ ಜಿಲ್ಲೆಗೆ 4ನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ.
ಆನ್ಲೈನ್ನಲ್ಲಿ ಪರಿಶೀಲಿಸುವುದು ಹೇಗೆ?
ಕೆಲವೇ ಕ್ಷಣಗಳಲ್ಲಿ karresults.nic.in/ ವೆಬ್ಸೈಟ್ನಲ್ಲಿ ಪ್ರಕಟವಾಗಲಿದ್ದು, ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
ಕರ್ನಾಟಕ ಮಂಡಳಿಯ ಅಧಿಕೃತ ವೆಬ್ಸೈಟ್ಗೆ (karresults.nic.in/) ಭೇಟಿ ನೀಡಿ
ಫಲಿತಾಂಶದ ಲಿಂಕ್ ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ
ದ್ವಿತೀಯ ಪಿಯುಸಿ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ
ಫಲಿತಾಂಶದ ಲಿಂಕ್ನಲ್ಲಿ ದ್ವಿತೀಯ ಪಿಯುಸಿ ರೋಲ್ ಸಂಖ್ಯೆ ನಮೂದಿಸಿ ಸಬ್ಮಿಟ್ ಮಾಡಿ
ನಿಮ್ಮ ಫಲಿತಾಂಶವು ಪರದೆಯ ಮೇಲೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ
ಸ್ಕ್ರೀನ್ ಮೇಲೆ ಕಾಣಿಸಿದ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.