ಇಟಗಿ : ನಿಮ್ಮ ಅಮೂಲ್ಯವಾದ ಮತದಾನದ ಹಕ್ಕಿನಿಂದ ವಂಚಿತರಾಗದೇ ಎಲ್ಲರೂ ಮೇ ೧೦ ರಂದು ತಪ್ಪದೇ ಮತಗಟ್ಟೆಗೆ ಬಂದು ಮತದಾನದಲ್ಲಿ ಪಾಲ್ಗೊಳ್ಳಿ ಎಂದು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ವಿರೇಶ ಸಜ್ಜನ್ ಹೇಳಿದರು.
ಇಟಗಿ ಗ್ರಾಮದ ಬೆಣಚಮರ್ಡಿ ಕೆರೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವತಿಯಿಂದ ನಡೆಯುತ್ತಿರುವ ಕೆರೆ ಹೂಳು ತೆಗೆಯುವ ಕೂಲಿ ಕಾರ್ಮಿಕರಿಗೆ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ದೇಶದ ಸಂವಿಧಾನ ಅಮೂಲ್ಯವಾದ ಮತದಾನದ ಹಕ್ಕು ನೀಡಿದೆ. ಉತ್ತಮವಾದ ಸರಕಾರ ತರುವುದು ನಿಮ್ಮ ಕೈಯಲ್ಲಿದೆ ಎಂದರು.
ಖಾನಾಪುರ ತಾಲೂಕು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಶೇಖರ ಹಿರೇಸೋಮಣ್ಣವರ ಮಾತನಾಡಿ, ಮತದಾನದ ಹಬ್ಬದಲ್ಲಿ ಪಾಲ್ಗೊಂಡು ಇತರರಿಗೂ ಮತದಾನದ ಬಗ್ಗೆ ಅರಿವು ಮೂಡಿಸಬೇಕು. ಯಾವುದೇ ಆಮಿಷ್ಯಗಳಿಗೆ ಒಳಗಾಗಬೇಡಿ ಎಂದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ತಾಂತ್ರಿಕ ಸಂಯೋಜಕ ಮುರಗೇಶ ಯಕ್ಕಂಚ್ಚಿ, ಗ್ರಾಪಂ ಸಿಬ್ಬಂದಿಗಳಾದ ಮಂಜುನಾಥ ಗಣಾಚಾರಿ, ಅನೀಲ ನಾಯ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.