ಮೈಸೂರು :
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊಮ್ಮಗ ಧವನ್ ರಾಕೇಶ್ ಭವಿಷ್ಯದಲ್ಲಿ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಾನೂನು ಓದಿದ ನಂತರ ನಾನು ರಾಜಕೀಯ ಪ್ರವೇಶ ಮಾಡುವುದಾಗಿ ಅವರು ತಿಳಿಸಿದ್ದಾರೆ. ತಂದೆ ರಾಕೇಶ್ ಅವರಿಗೆ ರಾಜಕೀಯ ಸೇರಲು ಆಸೆ ಇತ್ತು. ಆದರೆ ಅವರು ತೀರಿಕೊಂಡರು. ತಂದೆ ರಾಕೇಶ್ ಅವರ ರಕ್ತವೇ ನನ್ನ ರಕ್ತ. ಹೀಗಾಗಿ ರಾಜಕೀಯ ಸೇರಿ ತಂದೆಯ ಕನಸು ನನಸು ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ರಾಜಕೀಯದ ಬಗ್ಗೆ ತಾತ ಸಿದ್ದರಾಮಯ್ಯ ಅವರ ಬಳಿ ಕೇಳಿ ತಿಳಿದುಕೊಳ್ಳುತ್ತೇನೆ. ನಮ್ಮ ತಾತ ಮತ್ತೊಮ್ಮೆ ಗೆದ್ದು ಮುಖ್ಯಮಂತ್ರಿ ಆಗಬೇಕು. ಕಳೆದ ಸಲ ಚಿಕ್ಕಪ್ಪ ಯತೀಂದ್ರ ಅವರು ವರುಣಾ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ತಾತನ ಪರವಾಗಿ ನಾನು ಚುನಾವಣಾ ಪ್ರಚಾರ ಮಾಡುತ್ತೇನೆ. ಅವರನ್ನು ಗೆಲ್ಲಿಸಲು ಕ್ಷೇತ್ರದ ಜನತೆ ಜೊತೆ ಸೇರಿ ಕೆಲಸ ಮಾಡುವುದಾಗಿ ಧವನ್ ತಿಳಿಸಿದರು.
ನಮ್ಮ ಅಣ್ಣನಿಗೆ ಇದು ಕೊನೆಯ ಚುನಾವಣೆ. ಆಮೇಲೆ ಅವನ ಮಗ, ಮೊಮ್ಮಗ ಬೇರೆ ಯಾರಾದರೂ ನಿಲ್ಲುತ್ತಾರೆ. ಕೊನೆಯ ಚುನಾವಣೆಯಲ್ಲಿ ಗೆಲ್ಲುತ್ತಾನೆ ಕಳೆದ ಚುನಾವಣೆಯಲ್ಲಿ ನಿಂತು ವಿರೋಧ ಪಕ್ಷದ ನಾಯಕನಾಗಿದ್ದಾನೆ. ಈ ಸಲ ಆತ ಮುಖ್ಯಮಂತ್ರಿ ಆಗಬೇಕೆಂಬ ಜನರ ಬಯಕೆ. ಇದರ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡರು ಪ್ರತಿಕ್ರಿಯಿಸಿದರು.