ಮಂಗಳೂರು :
ಸುಳ್ಯ ತಾಲೂಕು ಸಂಪಾಜೆ ಬಳಿ ಸರಕಾರಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಆರು ಜನರ ಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಮೂರು ಮಕ್ಕಳು, ಇಬ್ಬರು ಮಹಿಳೆಯರು, ಪುರುಷ ಮೃತ ಪಟ್ಟಿದ್ದಾನೆ. ಮಗು ಹಾಗೂ ಪುರುಷನಿಗೆ ಗಂಭೀರ ಗಾಯಗೊಂಡಿದ್ದು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೆ ಗಾಯಗಳಾಗಿವೆ. ಮಂಡ್ಯ ಮೂಲದ ಕಾರು ಎನ್ನಲಾಗಿದೆ. ಮಡಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.