ನಾಗ್ಪುರ :
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಜಯೇಶ್ ಪೂಜಾರಯನ್ನು ಇಲ್ಲಿನ ಜೈಲಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗಿದೆ. ಬೆಳಗಾವಿ ಜೈಲಿನಿಂದ ನಿತಿನ್ ಗಡ್ಕರಿ ಅವರಿಗೆ ಎರಡು ಬಾರಿ ಬೆದರಿಕೆ ಹಾಕಿದ್ದ. ಹೀಗಾಗಿ ನಾಗ್ಪುರ ಪೊಲೀಸರು ಅವನ ವಿರುದ್ಧ ಯುಎಪಿಎ ಕಾಯ್ದೆಯಡಿ ಕ್ರಮ ಕೈಗೊಳ್ಳಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪುಣೆ ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಅವರು,
ಬೆಳಗಾವಿ ಹಿಂಡಲಗಾ ಜೈಲಲ್ಲಿದ್ದಾಗ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಹಾಕಿದ್ದ ಪೂಜಾರಿಗೆ ದಾವೂದ್ ಇಬ್ರಾಹಿಂ ಲಿಂಕ್ ಇರುವುದನ್ನು ತಿಳಿಸಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಫೋನ್ ನಲ್ಲಿ ಬೆದರಿಕೆ ಹಾಕಿದ್ದ ಕೈದಿ ಜಯೇಶ್ ಪೂಜಾರಿ ಅಲಿಯಸ್ ಕಾಂತಾಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಲಷ್ಕರ್ ಎ ತೊಯ್ಬಾ ಹಾಗೂ ನಿಷೇಧಿತ ಪಿಎಫ್ಐ ಜತೆ ಸಂಪರ್ಕ ಇದೆ ಎಂದು ನಾಗಪುರ ಪೊಲೀಸ್ ಆಯುಕ್ತ ಅಮಿತೇಶ್ ತಿಳಿಸಿದ್ದಾರೆ.
ಜಯೇಶನ ಬ್ರೇನ್ ವಾಶ್ ಆಗಿದೆ. ತೀವ್ರವಾದಿ ಆಗಿದ್ದಾನೆ. ಜೈಲಿನಲ್ಲಿ ಇತರ ಡಿ-ಗ್ಯಾಂಗ್ ಜೊತೆ ಸೇರಿ ಸಂಚು ರೂಪಿಸುತ್ತಿದ್ದಾನೆ ಎಂದು ತಿಳಿಸಿದ್ದ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಪೊಲೀಸರು ರಾತ್ರೋರಾತ್ರಿ ಬೆಳಗಾವಿ ಹಿಂಡಲಗಾ ಜೈಲಿಗೆ ಆಗಮಿಸಿ ಜಯೇಶನನ್ನು ವಶಕ್ಕೆ ಪಡೆದುಕೊಂಡಿದ್ದರು.
ಸಿಕ್ಕಿರುವ ಮಾಹಿತಿಯ ಪ್ರಕಾರ, ಜಯೇಶ್ ಪೂಜಾರಿ ಪಿಎಫ್ಐ, ದಾವೂದ್ ಇಬ್ರಾಹಿಂ ಮತ್ತು ಲಷ್ಕರ್-ಎ ತೊಯ್ಬಾ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ನಾಗ್ಪುರ ಪೊಲೀಸರ ವಶದಲ್ಲಿದ್ದು, ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ. ನಾಗ್ಪುರ ಪೊಲೀಸರು ಬೆಳಗಾವಿಯಿಂದ ನಾಗಪುರಕ್ಕೆ ಕರೆತಂದಿದ್ದಾರೆ.
ನಿತಿನ್ ಗಡ್ಕರಿಗೆ ಬೆದರಿಕೆ ಪಾತಕಿ ದಾವೂದ್ ಸಂಪರ್ಕಗಳ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನಾಗ್ಪುರ ಪೊಲೀಸರು ಜಯೇಶ್ ಪೂಜಾರಿ ಮೇಲೆ ಯುಎಪಿಎ ಕಾಯ್ದೆಯಡಿ ಕ್ರಮಕ್ಕೆ ಪೊಲೀಸರು ಯೋಚಿಸುತ್ತಿದ್ದಾರೆ.
ಈತ ಕೇಂದ್ರ ಸಚಿವ ಗಡ್ಕರಿ ಅವರಿಗೆ 10 ಕೋಟಿ ರುಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಅದರ ನಂತರ ನಾಗ್ಪುರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. 10 ಕೋಟಿ ಠೇವಣಿ ಇಡಲು ಯುವತಿಯ ನಂಬರ್ ನೀಡಿದ ಜಯೇಶ್ ಪೂಜಾರಿಯನ್ನು ವಿಚಾರಣೆಗೊಳಪಡಿಸಿದ್ದರು. ಆ ಬಳಿಕ ಬೆಳಗಾವಿ ಜೈಲಿನಲ್ಲಿ ದಿಢೀರ್ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಜಯೇಶ್ ಪೂಜಾರಿಯಿಂದ ಎರಡು ಫೋನ್ ಮತ್ತು ಎರಡು ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಾಕ್ಷ್ಯದ ಆಧಾರದ ಮೇಲೆ ಜಯೇಶ್ ಪೂಜಾರಿಯನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ.
ಕೂಲಂಕಷ ತನಿಖೆ ನಡೆಯುತ್ತಿದೆ.
ಬೆಳಗಾವಿ ಜೈಲಿನಿಂದ ನೇರವಾಗಿ ದೇಶದ ಹಿರಿಯ ಕೇಂದ್ರ ಸಚಿವರ ಕಚೇರಿಗೆ ಸುಲಿಗೆ ಮಾಡಿದ ಜಯೇಶ್ ಪೂಜಾರ ಬೆದರಿಕೆ ಕರೆ ನಾಗ್ಪುರ ಪೊಲೀಸರನ್ನು ನಿದ್ದೆಗೆಡಿಸಿತ್ತು. ಆದರೆ ಈಗ ಜಯೇಶ್ ಪೂಜಾರ ಕಸ್ಟಡಿಗೆ ಪಡೆದ ನಂತರ ನಾಗ್ಪುರ ಪೊಲೀಸರು ಆತನನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಬೆದರಿಕೆಯ ಹಿಂದೆ ಜಯೇಶ್ ಪೂಜಾರಿ ಉದ್ದೇಶವೇನು?
ಸದ್ಯ ನಾಗ್ಪುರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಗಡ್ಕರಿ ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿ ನಾಗ್ಪುರ ಪೊಲೀಸರ ವಶದಲ್ಲಿದ್ದಾನೆ. ಬೆದರಿಕೆ ಹಿಂದಿರುವ ಶಕ್ತಿಗಳ ಬಗ್ಗೆ ನಾಗಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
UAPA ಎಂದರೇನು ?ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ:
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆಯು ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಸಂಘಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಭಾರತೀಯ ಕಾನೂನಾಗಿದೆ . ಸಮಗ್ರತೆ ಮತ್ತು ಸಾರ್ವಭೌಮತೆಗೆ ವಿರುದ್ಧವಾದ ಭಾರತದ ಚಟುವಟಿಕೆಗಳೊಂದಿಗೆ ವ್ಯವಹರಿಸಲು ಅಧಿಕಾರವನ್ನು ಲಭ್ಯವಾಗುವಂತೆ ಮಾಡುವುದು ಮುಖ್ಯ ಉದ್ದೇಶವಾಗಿತ್ತು. ಕಾನೂನು ತೀರಾ ಇತ್ತೀಚಿನ ತಿದ್ದುಪಡಿ, ಕಾನೂನುಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಕಾಯಿದೆ, 2019 (UAPA 2019) ಯಾವುದೇ ಅಧಿಕೃತ ನ್ಯಾಯಾಂಗ ಅನುಸರಿಸಲು ವ್ಯಕ್ತಿಗಳ ಭಯೋತ್ಪಾದಕರೆಂದು ಗುರುತಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಸಿದೆ. UAPA ಅನ್ನು ಭಯೋತ್ಪಾದನಾ ವಿರೋಧಿ ಕಾನೂನು ಎಂದೂ ಕರೆಯಲಾಗುತ್ತದೆ.