ಬೆಳಗಾವಿ :
ರೈತರ ಕೃಷಿ ಪಂಪ್ ಸೆಟ್ ಶೀಘ್ರವಾಗಿ ವಿದ್ಯುತ್ ಸಂಪರ್ಕವನ್ನು ಒದಗಿಸುವ ದೃಷ್ಟಿಯಿಂದ, ಶೀಘ್ರ-ಸಂಪರ್ಕ ಯೋಜನೆಯನ್ನು ಪರಿಚಯಿಸಲಾಗಿದ್ದು, ಸದರಿ ಯೋಜನೆಯಲ್ಲಿ ರೈತರು 10000 ರೂಗಳ ಸೌಕರ್ಯ ಅಭಿವೃದ್ದಿ ಶುಲ್ಕ ಹಾಗೂ ವಿದ್ಯುತ್ ಭಾರಕ್ಕೆ ತಕ್ಕಂತೆ ಭದ್ರತಾ ಠೇವಣಿಯನ್ನು ಭರಿಸಿ, ಎಚ್.ಟಿ., ಎಲ್.ಟಿ. ಹಾಗೂ ಡಿ.ಟಿ.ಸಿ. ಕಾಮಗಾರಿಯ ಕಾರ್ಯವನ್ನು “ಸ್ವಯಂ ಕಾರ್ಯ ಯೋಜನೆ”ಯಡಿಯಲ್ಲಿ ಪೂರ್ಣಗೊಳಿಸಿದಲ್ಲಿ, ಸದರಿ ಕಾಮಗಾರಿಗೆ ಪರಿವರ್ತಕವನ್ನು ಹೆಸ್ಕಾಂ ಕಂಪನಿಯು ಉಚಿತವಾಗಿ ನೀಡುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.
ಪರಿವರ್ತಕ ವಿಫಲಗೊಂಡ ಸಮಯದಲ್ಲಿ ಗ್ರಾಹಕರು 1912 ಗೆ ದೂರು ದಾಖಲಿಸಿದಾಗ, ಗ್ರಾಹಕರ ಪ್ರತಿನಿಧಿಯು ಸಂಬಂಧಪಟ್ಟ ಕಾರ್ಯ ವ್ಯಾಪ್ತಿಯ ಶಾಖಾಧಿಕಾರಿ/ಸಹಾಯಕ ಕಾರ್ಯನಿರ್ವಾಹಕ/ ಕಾರ್ಯನಿವಾಹಕ ಅಭಿಯಂತರರು ರವರಿಗೆ ಮಾಹಿತಿಯನ್ನು ನೀಡುತ್ತಾರೆ. ಈ ಮೂಲಕ ಕಂಪನಿಯ ಸಿಬ್ಬಂದಿಯವರು ವಿಫಲಗೊಂಡ ಪರಿವರ್ತಕವನ್ನು 24 ಗಂಟೆಯೊಳಗೆ ಬದಲಾಯಿಸಲು ಕ್ರಮವಹಿಸಲಾಗುವುದು.
ವಿಫಲಗೊಂಡ ಪರಿವರ್ತಕಗಳ ಬದಲಾವಣೆ:
ಪರಿವರ್ತಕಗಳು ವಿಫಲಗೊಂಡ ಸಮಯದಲ್ಲಿ, 24 ಗಂಟೆಗಳೊಳಗಾಗಿ ಪರಿವರ್ತಕಗಳ ಬದಲಾಯಿಸುವ ಉದ್ದೇಶಕ್ಕಾಗಿ ಹೆಸ್ಕಾಂ ಕಂಪನಿಯು ಬೆಳಗಾವಿ ಜಿಲ್ಲೆ ವ್ಯಾಪ್ತಿಯ ಎಲ್ಲ ಕಾರ್ಯ ಮತ್ತು ಪಾಲನೆ ವಿಭಾಗಗಳ ಉಗ್ರಾಣಗಳಲ್ಲಿ ಉತ್ತಮವಾದ ಪರಿವರ್ತಕಗಳ ದಾಸ್ತಾನು ಹೊಂದಿರುತ್ತದೆ. ಇದರಿಂದ ಗ್ರಾಹಕರಿಗೆ 24 ಗಂಟೆಯ ಅವಧಿಯೊಳಗೆ ಪರಿವರ್ತಕವನ್ನು ಬದಲಾಯಿಸಲಾಗುವುದು.
ವಿಭಾಗವಾರು ಅಧಿಕಾರಿಗಳ ವಿವರ:
ಬೆಳಗಾವಿ ನಗರದ ಕಾರ್ಯನಿರ್ವಾಹಕ ಅಭಿಯಂತರರ ದೂರವಾಣಿ ಸಂಖ್ಯೆ 9448370241 ಅಥವಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ದೂರವಾಣಿ ಸಂಖ್ಯೆ 9480881987, 9448370244, 9448094489 ಹಾಗೂ ಬೆಳಗಾವಿ ಗ್ರಾಮೀಣದ ಖಾನಾಪೂರ ಕಾರ್ಯನಿರ್ವಾಹಕ ಅಭಿಯಂತರರ ದೂರವಾಣಿ ಸಂಖ್ಯೆ
9448370243 ಅಥವಾ ಗ್ರಾಮೀಣ ಉಪ ವಿಭಾಗಗಳ ದೂರವಾಣಿ ಸಂಖ್ಯೆ 9448370242 ಹಾಗೂ 9480882087 9448472224 ಯನ್ನು ಸಂಪರ್ಕಿಸಬಹುದು.
ಅದೇ ರೀತಿಯಲ್ಲಿ ಬೈಲಹೊಂಗಲ, ಕಿತ್ತೂರು, ಸವದತ್ತಿ ಕಾರ್ಯನಿರ್ವಹಕ ಅಭಿಯಂತರರ ದೂರವಾಣಿ ಸಂಖ್ಯೆ
9448370268 ಹಾಗೂ ರಾಮದುರ್ಗ 9480883886,
ಘಟಪ್ರಭಾ, ಗೋಕಾಕ, ಮೂಡಲಗಿ ದೂರವಾಣಿ ಸಂಖ್ಯೆ
9448370247, ಚಿಕ್ಕೋಡಿ, ನಿಪ್ಪಾಣಿ 9448370245, ರಾಯಬಾಗ 9483507199 ಹಾಗೂ ಅಥಣಿ ಕಾಗವಾಡ ದೂರವಾಣಿ ಸಂಖ್ಯೆ 9449017644 ಗೆ ಸಂಪರ್ಕಿಸಬಹುದಾಗಿದೆ.
ಹೆಸ್ಕಾಂ ಕಂಪನಿಯು ಶುಲ್ಕ ರಹಿತ ದೂರವಾಣಿ 1912 ಸಂಖ್ಯೆಯ ಮೂಲಕ ಗ್ರಾಹಕರುಗಳು ವಿದ್ಯುತ್ ಸರಬರಾಜಿನಲ್ಲಿ ಅಡಚಣೆ, ವಿಫಲಗೊಂಡ ಪರಿವರ್ತಕಗಳ ಬದಲಾವಣೆ ಹಾಗೂ ಇತರೇ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.