*ಸಿಕ್ಕ ಅವಕಾಶದ ರಾಜಕೀಯ ಏಣಿ ಏರದ ಅನಿಲ ಬೆನಕೆ*
*ಸ್ವಂತಸ್ಥಿಕೆ ಮೆರೆಯದೇ ಆಲಸಿ ಪ್ರತಿನಿಧಿತನವೇ ಟಿಕೇಟ್ ಕೈತಪ್ಪಲು ಕಾರಣ..!?
ಬೆಳಗಾವಿ:ಸಿಕ್ಕ ಅವಕಾಶ ಸದುಪಯೋಗ ಮಾಡಿಕೊಳ್ಳದೇ ಒಂದೇ ಅವಧಿಗೆ ಸೀಮಿತ ರಾಜಕೀಯ ಅಂತ್ಯ ಮಾಡಿಕೊಂಡ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಸುದ್ದಿಯಲ್ಲಿದ್ದಾರೆ.
ಬಿಜೆಪಿ ಕೇಂದ್ರ ಸಮಿತಿ ಇಂದು ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಬೆಳಗಾವಿ ನಗರ ಉತ್ತರ ಕ್ಷೇತ್ರದ ಹಾಲಿ ಶಾಸಕ ಅನಿಲ ಬೆನಕೆ ಈಗ ಟಿಕೇಟ್ ಸಿಗದೆ ಮನೆಯ ಹಾದಿ ಹಿಡಿದಿದ್ದಾರೆ.
ಅನಿಲ ಬೆನಕೆಗೆ ಟಿಕೇಟ್ ವಂಚನೆ ಆಗುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಮೂರ್ನಾಲ್ಕು ತಿಂಗಳಿಂದಲೇ ಚರ್ಚೆ ಗರಿಗೆದರಿತ್ತು.
ಕಳೆದ ಐದು ವರ್ಷ ಧರ್ಮದಂಗಲ ಆಗದಂತೆ ನಗರ ಶಾಂತ ಉಳಿದಿದ್ದು ಬಿಟ್ಟರೆ, ಅನಿಲ ಬೆನಕೆ ಅವರಿಂದ ಯಾವುದೇ ನಿರೀಕ್ಷಿತ ಪ್ರತಿನಿಧಿತ್ವ ಬೆಳಗಾವಿ ಉತ್ತರಕ್ಕೆ ಸಿಗದಿರುವುದು ಗಮನ ಸೆಳೆದಿದೆ. ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಆದರೂ ಸುಮ್ಮನಿದ್ದ ಶಾಸಕ, ನಗರದಾದ್ಯಂತ ರಸ್ತೆ, ಒಳಚರಂಡಿ ಸ್ವಚ್ಚತೆಯ ಬಗ್ಗೆಯೂ ಗಮನ ಹರಿಸದೇ ಸಮರ್ಥ ಶಾಸಕತ್ವ ನಿಭಾಯಿಸದಿರುವುದೇ ಅನಿಲ ಬೆನಕೆ ಕಿಕ್ ಔಟ್ ಗೆ ಕಾರಣ ಎನ್ನಲಾಗಿದೆ.
ಶಾಸಕನಾಗಿ ತನ್ನ ಸ್ವಂತಸ್ಥಿಕೆ ಬಿಟ್ಟು, ಮತ್ತೊಬ್ಬ ನಾಯಕನ ಅಣತಿಯಂತೆ ಹಿಂದೆ ಅಡ್ಡಾಡಿ ಈಗ ಟಿಕೇಟ್ ವಂಚಿತರಾಗಿರುವುದು ಮುಖ್ಯ ಕಾರಣ ಎಂಬ ಚರ್ಚೆ ನಡೆದಿದೆ.
ಕಳೆದ ಐದು ವರ್ಷ ನಗರ ನಾಗರಿಕರು ಹೊಯ್ಯಕೊಂಡರೂ, ಬಾಯಿ ಬಡಕೊಂಡರೂ ಗಮನ ಹರಿಸದ ಶಾಸಕ ಅನಿಲ ಬೆನಕೆ ಕೊನೆಯದಾಗಿ ರಸ್ತೆ ನಿರ್ಮಾಣ, ಒಳಚರಂಡಿ ಅಭಿವೃದ್ಧಿ, ಬೀದಿದೀಪಗಳ ವ್ಯವಸ್ಥೆಯನ್ನು ಮಾಡದೇ ಕಾಲ ಕಳೆದು ಚುನಾವಣೆ ಘೋಷಣೆಯಾದಾಗ 15 ದಿನಗಳ ಹಿಂದೆ ಬೆರಳೆಣಿಕೆಯ ರಸ್ತೆಗಳಲ್ಲಿ ಕಳಪೆ ಡಾಂಬರು ಹಾಕಲಾಗಿದೆ…. ಏನೂ ಮಾಡದೇ ಸುಸ್ತಾದರು…’ ಎಂಬಂತೆ ಅನಿಲ ಬೆನಕೆ ಅವರ ಕಾರ್ಯಗಳು ಗೌನ. ಒಂದು ಕ್ಷೇತ್ರದ ಶಾಸಕನಾಗಿ ಸ್ವತಂತ್ರ ಕಾರ್ಯನಿರ್ವಹಣೆ ಮಾಡುವುದನ್ನು ಬಿಟ್ಟು ಇನ್ನೊಬ್ಬ ನಾಯಕನ ಅಣತಿಯಂತೆ ಅಡ್ಡಾಡಿದರು ಎಂಬ ಹಣೆಪಟ್ಟಿಯೂ ಅನಿಲ ಬೆನಕೆ ಅವರಿಗೆ ಬಿದ್ದಿತ್ತು.ವಿಧ್ಯಾವಂತ, ಸಮಾಜ ಅನುರಾಗಿ, ವೃತ್ತಿಯಲ್ಲಿ ವೈದ್ಯ, ಸಮಾಜ ಸೇವಕ ಜೊತೆಗೆ ಪ್ರಬಲ ಲಿಂಗಾಯತ ಸಮಾಜದ ಡಾ. ರವಿ ಪಾಟೀಲ ಟಿಕೇಟ್ ಗಿಟ್ಟಿಸಿಕೊಂಡಿರುವ ಸುದ್ದಿ ಈಗ ನಗರದಾದ್ಯಂತ ಸಂಭ್ರಮಕ್ಕೆ ಕಾರಣವಾಗಿದೆ.