ಬೆಳಗಾವಿ :
ಇಲ್ಲಿಯ ಕೋಟೆ ಆವರಣದ ರಾಮಕೃಷ್ಣ ಮಿಷನ್ ವತಿಯಿಂದ ವಸಂತ ವಿಹಾರ- 2023 ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ.
ಏಪ್ರಿಲ್ 15 ರಿಂದ 30 ರವರೆಗೆ 13-16 ವರ್ಷದ ಬಾಲಕರಿಗೆ ಹಾಗೂ ಮೇ 3 ರಿಂದ 17 ರವರೆಗೆ ಪ್ರತಿದಿನ ಬೆಳಗ್ಗೆ 7:30 ರಿಂದ 12:30 ರವರೆಗೆ ಬಾಲಕರಿಗೆ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ.
ಮೇ 1 ರಿಂದ 15 ರವರೆಗೆ 6 ನೇ ತರಗತಿಯಿಂದ 10 ನೇ ತರಗತಿವರೆಗಿನ ಬಾಲಕಿಯರಿಗೆ ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:30 ರವರೆಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಬೆಳಗಾವಿ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ತಮ್ಮ ಹೆಸರು ನೋಂದಾಯಿಸುವಂತೆ ಕೋರಲಾಗಿದೆ. ಶೀಲ ನಿರ್ಮಾಣ, ವಿದ್ಯಾರ್ಥಿ ಜೀವನದಲ್ಲಿ ಮೌಲ್ಯಗಳು, ಏಕಾಗ್ರತೆ ಮತ್ತು ಸ್ವಯಂಶಿಸ್ತು, ಇತರರಿಗೆ ಸೇವೆ, ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ದೇಶಭಕ್ತಿ, ಗುರುವಿನ ಮಹತ್ವ, ಸಂತರ ಮತ್ತು ಅವತಾರಗಳ ಜೀವನ, ದೈಹಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಅಭಿವೃದ್ಧಿ, ದೇವಾಲಯ ಭೇಟಿ, ಪ್ರಾರ್ಥನೆ, ವೇದ ಪಠಣ ಮತ್ತು ಭಜನೆ, ಧ್ಯಾನ, ಭಗವದ್ಗೀತೆ ಮತ್ತು ಸುಭಾಷಿತ ಶ್ಲೋಕಗಳು, ಯೋಗಾಸನ ಕೈಂಕರ್ಯ, ಶ್ರಮದಾನ ಮೌಲ್ಯ ಮತ್ತು ನೈತಿಕ ಪಾಠಗಳು, ಗುಂಪು ಚಟುವಟಿಕೆ, ವಿನೋದ ಮತ್ತು ಸ್ಮರಣೆ ಆಟಗಳು ಹೀಗೆ ಬೇಸಿಗೆ ಶಿಬಿರದಲ್ಲಿ ವಿವಿಧ ಚಟುವಟಿಕೆ ನಡೆಯಲಿವೆ ಎಂದು ರಾಮಕೃಷ್ಣ ಮಿಷನ್ ಆಶ್ರಮದ ಪ್ರಕಟಣೆ ತಿಳಿಸಿದೆ.