ತೀರಾ ಬಡತನದಿಂದ ಜೀವನದಲ್ಲಿ ಮೇಲೆ ಬಂದು ಸದಾ ತತ್ವ ಸಿದ್ಧಾಂತಗಳನ್ನೇ ಪ್ರತಿಪಾದಿಸುತ್ತಿದ್ದ ಈ ಬಿಜೆಪಿ ನಾಯಕ ಇದೀಗ ಸ್ವತಃ ತಮ್ಮದೇ ಪಕ್ಷದ ನಿಲುವನ್ನು ಆಕ್ಷೇಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಬೆಳಗಾವಿ : ಗ್ಯಾಸ್ ಸಿಲೆಂಡರ್ ದರ ಹೆಚ್ಚಳ ಕುರಿತು ಇದೀಗ ಬೆಳಗಾವಿಯ ಬಿಜೆಪಿ ನಾಯಕರೊಬ್ಬರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಅಣಕಿಸಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಮುಂದಾಗಿದ್ದ ಬೆಳಗಾವಿಯ ಖ್ಯಾತ ಉದ್ಯಮಿ ಇದೀಗ 2013 ರಲ್ಲಿ ಗ್ಯಾಸ್ ದರ 391 ಇದ್ದು ಸ್ಮೃತಿ ಇರಾನಿ ಆಗಿನ ಯುಪಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದ್ದನ್ನು ನೆನಪಿಸಿದ್ದಾರೆ.
ಅದರ ಜೊತೆಗೆ ಈಗ ಅಂದರೆ 2023 ರಲ್ಲಿ ಗ್ಯಾಸಿಗೆ 1,110 ಇದೆ ಎಂದು ಎಂಬ ಫೋಟೋವನ್ನು ವಾಟ್ಸಪ್ ಗುಂಪುಗಳಲ್ಲಿ ಶೇರ್ ಮಾಡುತ್ತಿರುವುದು ಸ್ವತಃ ಬಿಜೆಪಿ ಕಾರ್ಯಕರ್ತರನ್ನೇ ಗೊಂದಲಕ್ಕೆ ತಳ್ಳಿದೆ.
ಬೆಳಗಾವಿಯ ಖ್ಯಾತ ಉದ್ಯಮಿಯಾಗಿರುವ ಇವರು ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಮುಂದಾಗಿದ್ದರು. ಪ್ರಬಲ ಸಮುದಾಯದ ಹೆಸರಿನಲ್ಲಿ ಪ್ರಭಾವಿ ಸ್ವಾಮೀಜಿ ಮೂಲಕ ಟಿಕೆಟ್ ಪಡೆಯಲು ಮುಂದಾಗಿದ್ದರು. ಆದರೆ, ಇದೀಗ ಅವರೇ ಸ್ವತಃ ಬಿಜೆಪಿ ಕುರಿತು ತಮ್ಮ ನಿಲುವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.