ಬೆಳಗಾವಿ :
ಬೆಂಕಿ ಆಕಸ್ಮಿಕಕ್ಕೆ ಅಂಗಡಿ ಸಂಪೂರ್ಣ ಭಸ್ಮವಾಗಿದೆ. ರಾಮತೀರ್ಥನಗರ ಕ್ರಿಕೆಟ್ ಮೈದಾನದ ಬಳಿ ಮಂಗಳವಾರ ರಾತ್ರಿ ಟೈರ್ ಅಂಗಡಿಗೆ ಬೆಂಕಿಗೆ ಆಹುತಿಯಾಯಿತು. ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರೂ ನೀರು ಖಾಲಿಯಾದ್ದರಿಂದ ಬೆಂಕಿ ನಂದಿಸುವ ಪ್ರಯತ್ನ ವ್ಯರ್ಥವಾಯಿತು. ನಂತರ ಇನ್ನೊಂದು ವಾಹನ ತರಿಸಿ ಬೆಂಕಿ ನಂದಿಸಲಾಯಿತು. ಜೊತೆಗೆ ಆಸು ಪಾಸಿನಲ್ಲಿದ್ದ ಬೋರ್ ವೆಲ್ ಗಳ ನೀರನ್ನು ಸಹ ಬಳಸಲಾಯಿತು.