ಬೆಂಗಳೂರು :
ದಶಕಗಳಿಂದ ಬೆಳಗಾವಿಯಲ್ಲಿ ಸೇವೆ ಸಲ್ಲಿಸಿ ಜನಮನ ಗೆದ್ದಿದ್ದ ಕಲಾವಿದ, ಚಲನಚಿತ್ರ ನಟ ಮತ್ತು ಪತ್ರಕರ್ತ ಎನ್.ನಟರಾಜ್ ಅವರು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.
2023 ರಿಂದ 26ನೇ ಸಾಲಿಗೆ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅವರು ಆಯ್ಕೆಯಾಗಿದ್ದಾರೆ. ನಟರಾಜ್ ಅವರು ಕರ್ನಾಟಕ ಸರಕಾರದಿಂದ ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಎರಡು ಸಲ ಸಂಘಟನಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಬೆಳಗಾವಿಯಲ್ಲಿ ಚಲನಚಿತ್ರ ಅಕಾಡೆಮಿಯಿಂದ ನಡೆದ ಚಲನ ಚಿತ್ರೋತ್ಸವದ ಸಂಚಾಲಕರಾಗಿದ್ದರು. ಕಳೆದ ಐದು ವರ್ಷದಿಂದ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಜೀವ ಸದಸ್ಯರಾಗಿದ್ದಾರೆ. ಚಲನಚಿತ್ರರಂಗದಲ್ಲಿ ಅಪಾರವಾಗಿ ಶ್ರಮಿಸಿದ ಅವರು ಸ್ನೇಹಶೀಲ ವ್ಯಕ್ತಿತ್ವದವರಾಗಿದ್ದಾರೆ.