ಬೆಳಗಾವಿ :
ಜನ ಸಾಹಿತ್ಯ ಪೀಠದ ಅಧ್ಯಕ್ಷ ಬಸವರಾಜ ಗಾರ್ಗಿಯವರ ಹಾಸ್ಟೆಲ್ ಮಕ್ಕಳ ಕಥೆಗಳು ಮಕ್ಕಳ ಕಥಾ ಸಂಕಲನವು ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ ಕೊಡಮಾಡುವ ೨೦೨೨ ರ ಸಾಲಿನ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿಗೆ ಭಾಜನವಾಗಿದೆ.
ಬೆಳಗಾವಿಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಚಿಂತಕಿ ಲೀಲಾ ಕಲಕೋಟಿ ಮತ್ತು ಜಾನಪದ ವಿದ್ವಾಂಸ ಡಾ. ರಾಮು ಮೂಲಗಿ ಪ್ರದಾನ ಮಾಡಿದರು.
ಹಿರಿಯ ಸಾಹಿತಿಗಳಾದ ಪ್ರಾ.ಬಿ. ಎಸ್. ಗವಿಮಠ, ಡಾ. ಬಸವರಾಜ ಜಗಜಂಪಿ, ಡಾ. ರಾಮಕೃಷ್ಣ ಮರಾಠೆ,ಡಾ.ಎ.ಬಿ.ಘಾಟಗೆ, ಐತಿಹಾಸಿಕ ಕಾದಂಬರಿಕಾರ ಯ. ರು. ಪಾಟೀಲ, ರಂಗಕರ್ಮಿ ಏಣಗಿ ಸುಭಾಷ, ವಿಜಯಪುರದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮನಗೌಡ ಕನ್ನೋಳಿ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಲಕ್ಷ್ಮಣ ಬಬಲಿ , ಜನ ಸಾಹಿತ್ಯ ಪೀಠದ ಶಿವರಾಯ ಏಳುಕೋಟಿ, ಡಾ ಪಿ ಜಿ ಕೆಂಪಣ್ಣವರ,ಕಾಯಕ ಶ್ರೀ ಪ್ರತಿಷ್ಠಾನದ ಬಸವರಾಜ ಸುಣಗಾರ ಕರ್ಕಿ ಪ್ರತಿಷ್ಠಾನದ ಎಸ್.ಡಿ. ಕರ್ಕಿ
ಸನದಿ ಪ್ರತಿಷ್ಠಾನದ ಸದಸ್ಯರು ಬಸವರಾಜ ಗಾರ್ಗಿಯವರನ್ನು ಅಭಿನಂದಿಸಿದ್ದಾರೆ.