ಇಟಗಿ :
ಸಂಸ್ಕಾರವಂತ ಮಕ್ಕಳಿಗಾಗಿ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರುವಾಗಬೇಕಾದ ಅವಶ್ಯಕತೆಯಿದೆ ಎಂದು ಅವರೊಳ್ಳಿ-ಬೀಳಕಿ ರುದ್ರಸ್ವಾಮಿ ಮಠದ ಶ್ರೀ ಚೆನ್ನಬಸವದೇವರು ಹೇಳಿದರು.
ಇಟಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಜ್ಯೋತಿರ್ಲಿಂಗ ಮಂದಿರದ ವಾಸ್ತುಶಾಂತಿ ಹಾಗೂ ಕಳಸಾರೋಹಣ ಕಾರ್ಯಕ್ರಮದ ಧರ್ಮಚಿಂತನಾ ಗೋಷ್ಠಿಯಲ್ಲಿ ಮಾತನಾಡಿದರು. ತಾಯಿಗೆ ತನ್ನ ಮಗು ಯಾವುದೇ ಸ್ಥಿತಿಯಲ್ಲಿದ್ದರು ಅದೇ ಮುದ್ದು. ಸಂಸ್ಕಾರದತ್ತ ಸಾಗಿದರೆ ಸದ್ಗತಿ ಸಾಧ್ಯ. ಕತ್ತಲೆಯ ಕಳೆಯಲು ಧಾರ್ಮಿಕ ಸಮಾರಂಭಗಳು ಬೇಕು ಎಂದರು.
ಪಾರಿಶ್ವಾಡದ ವೇದಮೂರ್ತಿ ಶ್ರೀ ಗುರುಸಿದ್ದಯ್ಯ ಕಲ್ಮಠ ಸ್ವಾಮಿಗಳು ಮಾತನಾಡಿ, ನಮ್ಮಲ್ಲಿಯ ದುಶ್ಚಟಗಳು ದೂರವಾಗಬೇಕು. ಮನಸ್ಸಿನ ಕಳೆ ಕಳೆಯಲು ಮಹಾತ್ಮರ ಹಿತನುಡಿಗಳು ಬೇಕು. ಮಾನವೀಯ ತತ್ವದಲ್ಲಿ ಸನ್ಮಾರ್ಗದಲ್ಲಿ ಮುನ್ನಡೆಯಬೇಕೆಂದರು.
ಚಿಕ್ಕಮುನವಳ್ಳಿಯ ಶ್ರೀ ಶಿವಪುತ್ರ ಶ್ರೀಗಳು ಹಾಗೂ ಹೂಲಿಕಟ್ಟಿಯ ಶ್ರೀ ಲಿಂಗಾನAದ ಶ್ರೀಗಳು ಮಾತನಾಡಿದರು.
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೂತನ ದೇವಸ್ಥಾನ ನಿರ್ಮಾಣಕ್ಕೆ ಸಹಾಯ, ಸಹಕಾರಿ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು.
ಸುರೇಶ ಹುಣಶೀಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜನತಾ ಶಿಕ್ಷಣ ಪ್ರಸಾರ ಸಮಿತಿ ಅಧ್ಯಕ್ಷ ವಿಜಯ ಸಾಣಿಕೊಪ್ಪ, ವಿವೇಕ ಕುರಗುಂದ, ಈಶ್ವರ ಶೀಲಿ, ನಾಗೇಂದ್ರ ಚೌಗಲಾ, ಗಿರೀಶ ಗಂದಿಗವಾಡ, ಈಶ್ವರ ಗುಂಡಪ್ಪನವರ, ಉತ್ಕರ್ಷ ಧಡೋತಿ, ವಿಠ್ಠಲ ಪುಂಡಿ, ಕೇದಾರಿ ಮಾತಾರಿ ಹಾಗೂ ಇತರರು ಉಪಸ್ಥಿತರಿದ್ದರು.
ಈರಣ್ಣ ಕಾದ್ರೋಳ್ಳಿ ನಿರೂಪಿಸಿ, ವಂದಿಸಿದರು.