ಬೆಂಗಳೂರು : ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳ ಶುಕ್ರವಾರ 60 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಹೊಸದಾಗಿ ಸೇರ್ಪಡೆಗೊಂಡವರು, ಪಕ್ಷ ಸಂಘಟನೆಯಲ್ಲಿ ಕ್ರಿಯಾಶೀಲರಾಗಿರುವವರು, ರೈತರು, ಮಹಿಳೆಯರು ಸೇರಿದಂತೆ ಜನಸಾಮಾನ್ಯರಿಗೆ ಹೆಚ್ಚಿನ ಟಿಕೆಟ್ ನೀಡಿದೆ. 60 ಅಭ್ಯರ್ಥಿಗಳಲ್ಲಿ 11 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. 14 ಅಭ್ಯರ್ಥಿಗಳು ರೈತರಿದ್ದಾರೆ. ಬಿಎಂಟಿಸಿ ಮಾಜಿ ಕಂಡಕ್ಟರ್ ಅವರಿಗೂ ಟಿಕೆಟ್ ನೀಡಲಾಗಿದೆ.
ಪಟ್ಟಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಬೇರೆಲ್ಲ ಪಕ್ಷಗಳಿಗಿಂತ ಮೊದಲೇ ನಾವು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಪ್ರಣಾಳಿಕೆ ಸಹ ಬಿಡುಗಡೆ ಮಾಡಲಾಗಿದೆ. 60 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಈಗ ಬಿಡುಗಡೆ ಮಾಡಿದ್ದೇವೆ. ಆಮ್ ಆದ್ಮಿ ಪಾರ್ಟಿಯು ಜನಸಾಮಾನ್ಯರಿಗೆ ಅವಕಾಶ ನೀಡುತ್ತಿದೆ. ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಸರಾಸರಿ ವಯಸ್ಸು 45 ದಾಟಿಲ್ಲ.ಎರಡನೇ ಪಟ್ಟಿಯಲ್ಲಿ ಒಟ್ಟು 14 ರೈತರಿಗೆ, 11 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಒಟ್ಟಾರೆಯಾಗಿ 18 ವಕೀಲರು, 6 ವೈದ್ಯರು, 23 ಇಂಜಿನಿಯರ್ಗಳು ಹಾಗೂ 4 ಐಟಿ ವೃತ್ತಿಪರರು ಹಾಗೂ ಐದು ಮಂದಿ ಡಾಕ್ಟರೇಟ್ ಪಡೆದವರು, 29 ಜನರ ಸ್ನಾತಕೋತ್ತರ ಪದವೀಧರರು, 68 ಪದವೀಧರರು, 6 ಎಂಬಿಎ ಪದವೀಧರರನ್ನು ಈ ಎರಡು ಪಟ್ಟಿಗಳು ಒಳಗೊಂಡಿವೆ” ಎಂದು ಹೇಳಿದರು.
60 ಅಭ್ಯರ್ಥಿಗಳ ಪಟ್ಟಿ ಇಂತಿದೆ…
ವಿಧಾನಸಭಾ ಕ್ಷೇತ್ರ ಹಾಗೂ ಅಭ್ಯರ್ಥಿಗಳ ಹೆಸರು
ಚಿಕ್ಕೋಡಿ-ಸದಲಗಾ- ಶ್ರೀಕಾಂತ ಪಾಟೀಲ
ಕಾಗವಾಡ-ಗುರಪ್ಪ ಬಿ ಮಗದುಮ್
ಅರಭಾವಿ-ಇಜಾಜ್ ಅಹಮದ್ ಕೊಟ್ಟಲಗಿ
ಗೋಕಾಕ-ಜಾನ್ಸ್ ಕುಮಾರ ಎಂ ಕರೆಪ್ಪಗೋಳ
ಕಿತ್ತೂರು -ಆನಂದ ಹಂಪಣ್ಣನವರ
ಬೀಳಗಿ-ಮುತ್ತಪ್ಪ ಕೋಮರ
ವಿಜಯಪುರ ನಗರ-ಹಾಶಿಂಪೀರ್ ವಾಲೀಕಾರ
ನಾಗಠಾಣ-ಗುರು ಚವ್ಹಾಣ
ಜೇವರ್ಗಿ-ವಿಶ್ವನಾಥ ರೆಡ್ಡಿ
ಯಾದಗಿರಿ-ಅಜರುದ್ದೀನ್ ರಾಣಾ
ಚಿತ್ತಾಪುರ-ಜಗದೀಶ ಸಾಗರ
ಕನಕಗಿರಿ -ಅನಿಲಕುಮಾರ ಆರ್. ಬೆಲಗಾರ
ಯಲಬುರ್ಗಾ-ಹನುಮಂತಪ್ಪ ಕುರಿ
ಶಿರಹಟ್ಟಿ -ಮಲ್ಲಿಕಾರ್ಜುನ ದೊಡ್ಡಮನಿ
ಗದಗ-ಪೀರಸಾಬ್ ಶೇಖ್ ದೊಡ್ಡಮನಿ
ನರಗುಂದ-ರಾಮಪ್ಪ ದ್ಯಾಮಪ್ಪ ಹೊವ್ವಣ್ಣವರ
ಕುಂದಗೋಳ-ನಿರಂಜನಯ್ಯ ಮನಕಟ್ಟಿಮಠ
ಕಾರವಾರ-ಅಶೀಶ ಪ್ರಭಾಕರ ಗಾಂವಂಕರ
ಕುಮಟಾ-ರಾಪಾ ನಾಯಕ
ಭಟ್ಕಳ-ನಸೀಮ್ ಅಹ್ಮದ್ ಖಾನ್
ಹಾನಗಲ್-ಸಾಯಿಕುಮಾರ
ಹಡಗಲಿ – ಶ್ರೀಧರ ನಾಯ್ಕ್
ಹಗರಿಬೊಮ್ಮನಹಳ್ಳಿ-ಹನುಮಂತಪ್ಪ
ಸಿರುಗುಡ್ಡ-ಲೋಕೇಶ ನಾಯಕ
ಬಳ್ಳಾರಿ ಶಹರ-ಯರಿಸ್ವಾಮಿ
ಚಳ್ಳಕೆರೆ-ಪಾಪಣ್ಣ
ಹಿರಿಯೂರು-ಕೆ ಜೆ ತಿಪ್ಪಸ್ವಾಮಿ
ಸೊರಬ- ಚಂದ್ರಶೇಖರ
ಉಡುಪಿ- ಪ್ರಭಾಕರಿ ಪೂಜಾರಿ
ತುಮಕೂರು ಗ್ರಾಮಾಂತರ- ದಿನೇಶಕುಮಾರ ಬಿ
ಮಧುಗಿರಿ-ಸೈಯದ್ ದುಜಾಮಿಲ್ ಪಾಷಾ
ಗೌರಿಬಿದನೂರು-ಸೈಯದ್ ನಾಸಿರ್ ಅಲಿ
ಶ್ರೀನಿವಾಸಪುರ-ಡಾ. ವೈ. ವಿ ವೆಂಕಟಾಚಲ
ಮುಳಬಾಗಿಲು-ಎಸ್ ವಿಜಯಕುಮಾರ
ಕೋಲಾರ-ಸುಹೇಲ್ ದಿಲ್ ನವಾಜ್
ಕೃಷ್ಣರಾಜಪುರ-ಕೇಶವಕುಮಾರ
ಬ್ಯಾಟರಾಯನಪುರ-ಉಮೇಶಬಾಬು
ಯಶವಂತಪುರ-ಶಶಿಧರ್ ಸಿ ಆರಾಧ್ಯ
ರಾಜರಾಜೇಶ್ವರಿನಗರ-ಅನಂತ ಸುಭಾಷಚಂದ್ರ
ಗೋವಿಂದರಾಜನಗರ-ಅಂಜನ ಗೌಡ
ಬಸವನಗುಡಿ-ಸತ್ಯಲಕ್ಷ್ಮಿ ರಾವ್
ಮಹದೇವಪುರ-ನಟರಾಜ ಪಿ. ಆರ್
ಬೆಂಗಳೂರು ದಕ್ಷಿಣ-ಅಶೋಕ ಮೃತ್ಯುಂಜಯ