ಬೆಳಗಾವಿ :ರಾಮನವಮಿ ಮೆರವಣಿಗೆ ವೇಳೆ ನಗರದ ಟಿಳಕಚೌಕ ಬಳಿಯ ರಾಮಲಿಂಗಖಿಂಡಗಲ್ಲಿಯ ಶಿವಸೇನೆ ಕಚೇರಿ ಎದುರು ಮೆರವಣಿಗೆ ಹೋಗುವಾಗ ಯುವಕನ ಮೇಲೆ ಗುರುವಾರ ಹಲ್ಲೆ ನಡೆದಿದೆ.ಮಂಜುನಾಥ ಎಂಬ ಯುವಕ ಮೆರವಣಿಗೆಯಲ್ಲಿ ಕನ್ನಡ ಧ್ವಜ ಹಾರಿಸಿದ್ದಾನೆ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ಮಾಡಲಾಗಿದೆ. ಈ ಬಗ್ಗೆ ಕನ್ನಡ ಹೋರಾಟಗಾರರು ಖಡೇ ಬಜಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.