ಬೆಳಗಾವಿ: ಕರ್ನಾಟಕ ಸರ್ಕಾರ 2023 ರ ಮುಂಗಡ ಪತ್ರದ ತಿದ್ದುಪಡಿ ಅನ್ವಯ ಪ್ರತಿ ಜಿ.ಎಸ್. ಟಿ ನೋಂದಾಯಿತ ವರ್ತಕರು ವಾರ್ಷಿಕ ವೃತ್ತಿ ತೆರಿಗೆ ರೂ. 2500.00 ಪಾವತಿಸಬೇಕಾಗಿರುತ್ತದೆ. ಇದರ ಕಡೆಯ ದಿನಾಂಕ 30 ಏಪ್ರಿಲ್ 2023 ಆಗಿರುತ್ತದೆ. ಸದರಿ ತೆರಿಗೆ ಹಣವನ್ನು ಸಕಾಲದಲ್ಲಿ ಪಾವತಿಸಲು ವಿಳಂಬ ವಾದಲ್ಲಿ ಬಡ್ಡಿ ಮತ್ತು ದಂಡವನ್ನು ಭರಣ ಮಾಡಬೇಕಾಗುತ್ತದೆ ಎಂದು ಕಾಮಕರ ಅಸೊಶಿಯೇಟ್ ನ ತೆರಿಗೆ ಸಲಹೆಗಾರರು ತಿಳಿಸಿದ್ದಾರೆ.
ಸದರಿ ತಿದ್ದುಪಡಿಯ ಮೊದಲು ವಾರ್ಷಿಕ ವಹಿವಾಟು 20 ಲಕ್ಷ ಕ್ಕಿಂತ ಕಡಿಮೆ ಇರುವ ವರ್ತಕರಿಗೆ ವೃತ್ತಿ ತೆರಿಗೆ ವಿನಾಯಿತಿ ಕೊಡಲಾಗಿತ್ತು. ಆದರೆ ಸದರಿ ತಿದ್ದುಪಡಿಯ ಮೂಲಕ ಸಣ್ಣ ಸಣ್ಣವರ್ತಕರಿಗೆ ವಿನಾಯಿತಿಯನ್ನು ಕಡಿತಗೊಳಿಸಲಾಗಿದೆ .