ಬೆಂಗಳೂರು :
ಬೆಂಗಳೂರಿನಿಂದ ಹೈದರಾಬಾದ್ ಮತ್ತು ಬೆಂಗಳೂರಿನಿಂದ ಮುಂಬೈ ನಡುವೆ ವಂದೇ ಭಾರತ ರೈಲು ಶೀಘ್ರದಲ್ಲಿಯೇ ಸಂಚಾರ ಪ್ರಾರಂಭಿಸಲಿದೆ ಎಂದು ಮೂಲ ಸೌಕರ್ಯ ಸಚಿವ ಸೋಮಣ್ಣ ಹೇಳಿದ್ದಾರೆ.
ಮೈಸೂರು-ಬೆಂಗಳೂರು-ಚೆನ್ನೈ ನಡುವೆ ವಂದೇ ಭಾರತ ರೈಲು ಸಂಚಾರ ಪ್ರಾರಂಭವಾಗಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನಿಂದ ಮುಂಬೈ, ಮತ್ತು ಹೈದರಾಬಾದ್ ಗೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭವಾಗಲಿದೆ. ಮುಂಬೈ, ಹೈದರಾಬಾದ್ ಗೆ ವಂದೇ ಭಾರತ ಸಂಚಾರ ಸಂಬಂಧ ರೈಲ್ವೆ ಸಚಿವರು ಮತ್ತು ರೈಲ್ವೆ ಕಾರ್ಯದರ್ಶಿಗೆ ರಾಜ್ಯ ಸರಕಾರ ಪತ್ರ ಬರೆದಿದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.