ದೆಹಲಿ :
ರೋಯಲ್ ರಾಂಕಿಂಗ್ ವೆಬ್ಸೈಟ್ 2023ರ ವಿಶ್ವದ ಸೇಫ್ ಸಿಟಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಇದರಲ್ಲಿ ಭಾರತದಿಂದ ಸೇಫ್ ಸಿಟಿಗಳ ಪಟ್ಟಿಯಲ್ಲಿ ಕರ್ನಾಟಕದ ಏಕೈಕ ನಗರವಾಗಿ ಕಡಲ ನಗರಿ ಮಂಗಳೂರು ಸ್ಥಾನ ಪಡೆದಿದೆ. ಅಬುದಾಬಿ ಮೊದಲ ಸ್ಥಾನ (88.3), ದೋಹಾ(86) ಮತ್ತು 3ನೇ ಸ್ಥಾನದಲ್ಲಿ ಅಜ್ಮಾನ್ (84.9) ಸೇರಿವೆ.
ಜಗತ್ತಿನ ಸೇಫ್ ಸಿಟಿ ಪಟ್ಟಿಯಲ್ಲಿ ಜಗತ್ತಿನ 24 ನಗರಗಳನ್ನು ಪರಿಗಣಿಸಲಾಗಿದೆ. ಮಂಗಳೂರು (74.5) ಪಟ್ಟಿಯಲ್ಲಿ ಸೇರಿದೆ. ನ್ಯುಬಿಯೋ ಎನ್ನುವ ಸಂಸ್ಥೆ ಸರ್ವೆ ಆಧರಿಸಿ 2019 ರಿಂದ ರೋಯಲ್ ರಾಕಿಂಗ್ ವೆಬ್ ಸೈಟ್ ನಾನಾ ವಿಚಾರಗಳಲ್ಲಿ ರಾಂಕ್ ನೀಡುವ ಕೆಲಸ ಮಾಡುತ್ತಿದೆ. ಮಂಗಳೂರು ಸೇಫ್ ಸಿಟಿ ಪಟ್ಟಿಯಲ್ಲಿ ಕೆಲವು ವರ್ಷಗಳಿಂದ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ.