ಬೆಳಗಾವಿ :
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಹಾನಗರ ಬೆಳಗಾವಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಬಲಿದಾನ್ ದಿವಸ್ ಪ್ರಯುಕ್ತ 13ನೇ ವರ್ಷದ ರಂಗ ದೇ ಬಸಂತಿ ಕಾರ್ಯಕ್ರಮವನ್ನು ದಿನಾಂಕ 23/03/2023 ರಂದು ನಗರದ ಐಎಂಇಆರ್ ಸಭಾಗೃಹದಲ್ಲಿ ನಡೆಯಿತು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಉದ್ಯಮಿಗಳಾದ ಸಚಿನ್ ಸಬ್ನಿಸ ಅವರಿಗೆ ಸನ್ಮಾನಿಸಲಾಯಿತು.
ಮುಖ್ಯವಕ್ತಾರರಾಗಿ ಆಗಮಿಸಿದ ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತರಾದ ಕಿರಣ ರಾಮ ಅವರು ಭಗತ್ ಸಿಂಗ್, ರಾಜಗುರು ಸುಖದೇವ್ ರವರ ಹೋರಾಟ ಮತ್ತು ಜೀವನ ಕುರಿತು ಸಂಪೂರ್ಣವಾಗಿ ತಿಳಿಸಿದರು.
ಎಬಿವಿಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ್ ಮಾತನಾಡಿ, ದೇಶದ ಶಕ್ತಿ ಎಂದರೆ ಯುವಕರು ಮತ್ತು ವಿದ್ಯಾರ್ಥಿಗಳು ಈ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯನ್ನು ಮೂಡಿಸುವ ಕೆಲಸ. ಎಬಿವಿಪಿ ಕಳೆದ ಏಳು ದಶಕಗಳಿಂದ ಮಾಡುತ್ತಾ ಬಂದಿದೆ ಹೇಳಿದರು. ನಂತರ ದೇಶ ಭಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆದವು.
ಎಬಿವಿಪಿಯ ರಾಜ್ಯ ಉಪಾಧ್ಯಕ್ಷ ವಿನಾಯಕ ಸಿಂಗ್ ರಜಪೂತ,ವಿಭಾಗ ಪ್ರಮುಖರಾದ ಡಾ.ಎಚ್. ಎಂ. ಚನ್ನಪ್ಪಗೋಳ, ಡಾ.ಆನಂದ ಹೊಸೂರು, ಪ್ರವೀಣ ಪ್ಯಾಟಿ, ಪ್ರಕಾಶ ಕಮತೆ,ರಾಜು ಅಂಗಡಿ, ನಗರ ಕಾರ್ಯದರ್ಶಿ ಪ್ರೀತಮ್ ಉಪರಿ ಸೇರಿದಂತೆ ನಗರದ ಗಣ್ಯರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.