ಚುನಾವಣೆ ಘೋಷಣೆಗೂ ಮುನ್ನವೇ ಅಕ್ರಮಕ್ಕೆ ಕಡಿವಾಣ ಹಾಕಿದ ಬೆಳಗಾವಿ SP..!
ಚೆಕ್ ಪೊಸ್ಟ್ ಗಳಲ್ಲಿ ಸಿಕ್ಕಿಬಿದ್ದ ಸಾವಿರಾರು ಲೀಟರ್ ಸರಾಯಿ, ಲಕ್ಷಾಂತರ ರೂ ಸಾಗಿಸುತ್ತಿದ್ದ ಖದೀಮರು..!
ಬೆಳಗಾವಿ: ಚುನಾವಣಾ ಪೂರ್ವ ಜಿಲ್ಲಾಡಳಿತ ಚುಟುಕುಗೊಂಡಿದ್ದು ಹಣ-ಹೆಂಡ ಹಾಗೂ ಆಮಿಷ ಸಾಗಾಣೆ ಮೇಲೆ ಕಟ್ಟೆಚ್ಚರ ವಹಿಸಿದ್ದು, ತೀವ್ರ ತಪಾಸಣೆ ಕೈಗೊಂಡಿದೆ.
ಕಳೆದ ಮೂರು ವಾರಗಳಲ್ಲಿ ಜಿಲ್ಲೆಯಲ್ಲಿ ಒಟ್ಟು ₹18,05250 ನಗದು ಹಣ ವಶಕ್ಕೆ ಪಡೆದಿದ್ದು, ₹4,05239 ಮೌಲ್ಯದ 1119.8 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ. ಹಣ, ಗೂಡ್ಸ್, ಸೀರೆಗಳು, ತಂಬಾಕು, ಅಲ್ಯೂಮಿನಿಯಮ್ ಗೃಹಬಳಕೆಗಳು, ಮಿಕ್ಸರ್ ಗ್ರೈಂಡರ್ ಸೇರಿ ಸಾಗಾಟದಲ್ಲಿದ್ದ ಮತ್ತಿತರ ಸೌಲಭ್ಯಗಳನ್ನು ತಪಾಸಣೆ ಮೂಲಕ ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ ಜಿಲ್ಲೆಯ ಗಡಿಯುದ್ದಕ್ಕೂ 21ಅಂತರ ರಾಜ್ಯ ಚೆಕ್ ಪೋಸ್ಟಗಳು, 29ಅಂತರ ಜಿಲ್ಲಾ ಚೆಕ್ ಪೋಸ್ಟಗಳನ್ನು ನಿರ್ಮಿಸಲಾಗಿದೆ.
ಕಂದಾಯ, ಪೊಲೀಸ್, ಅರಣ್ಯ, ಹೋಂಗಾರ್ಡ್, ಅಬಕಾರಿ, ಜಿಪಂ. ಲೆಕ್ಕಪರಿಶೋಧನೆ ಸೇರಿದಂತೆ ಜಿಲ್ಲೆಯ ಎಲ್ಲ ಇಲಾಖೆಗಳ ಚುನಾವಣಾ ಸಿಬ್ಬಂಧಿ ಕಾರ್ಯ ನಿರ್ವಹಿಸುತ್ತಿದ್ದು, ರಿಟರ್ನಿಂಗ್ ಆಫಿಸರ್, ಎಆರ್ ಓ, ಫ್ಯೈಯಿಂಗ್ ಸ್ಕ್ವಾಡ್, ಲೆಕ್ಕ ಸಂಶೋಧನಾ ದಳಗಳು ಕಾನೂನುಬದ್ಧವಾಗಿ ಚುನಾವಣೆ ನಡೆಸಲು ಕಾರ್ಯಾಚರಣೆಗೆ ಇಳಿದಿವೆ.ಸಾರ್ವಜನಿಕರು, ಬ್ಯಾಂಕಗಳು, ಖಾಸಗಿ ಫೈನಾನ್ಸ್ ಗಳು ಸೇರಿದಂತೆ ಇತರರು ಸೂಕ್ತ ದಾಖಲಾತಿ ಜೊತೆಗೆ SOP( standard Operating Procedure)ಇಲ್ಲದೇ ನಗದು ಹಣ ಸಾಗಾಟ ಮಾಡಿದರೆ ತಪಾಸಣೆ ಚೆಕ್ ಪೋಸ್ಟಗಳಲ್ಲಿ ತಪಾಸಣೆ ವೇಳೆ ವಶಕ್ಕೆ ಪಡೆಯಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.