ಅಥಣಿ :
ನನ್ನ ಕ್ಷೇತ್ರದ ಮತದಾರರು ನನ್ನ ದೇವರು ಆದ್ದರಿಂದ ಒಟ್ಟಾರೆಯಾಗಿ ಎಲ್ಲಾ ಸಮುದಾಯಗಳ ಅಭಿಪ್ರಾಯದ ಮೇರೆಗೆ ನಾನು ಚುನಾವಣೆಗೆ ಪಕ್ಷದ ಟಿಕೆಟ್ ಕೇಳಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧಾರ ಬರುವ 27ರೊಳಗಾಗಿ ಮಾಡುವುದಾಗಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಅವರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಮತ್ತು ಸಮುದಾಯ ಭವನಗಳಿಗೆ ಸುಮಾರು 16 ಕೋಟಿ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಜನರ ಒತ್ತಾಯದ ಮೇರೆಗೆ ನಾನು ವಿವಿಧ ಸಮುದಾಯಗಳ ಜನಾಭಿಪ್ರಾಯ ಸಂಗ್ರಹಿಸಿ ಜನರ ನಿರ್ಧಾರದ ಮೇರೆಗೆ ಟಿಕೆಟ್ ಕುರಿತು ನಿರ್ಧಾರಿಸುವೆ ಎಂಬುದಷ್ಟೆ ನನ್ನ ಹೇಳಕೆಯಾಗಿತ್ತು. ಈ ನನ್ನ ಹೇಳಿಕೆಯನ್ನ ಜಾರಕಿಹೋಳಿ ಯವರು ತಪ್ಪಾಗಿ ಅಪಾರ್ಥ ಮಾಡಿಕೊಂಡಿದ್ದಾರೆ ನಾನು ಎಲ್ಲಿಯೂ ಟಿಕೆಟ್ ಬೇಕು ಅಂತಾ ಹೇಳಿಲ್ಲ, ಅವರು ಸಹ ಹಿರಿಯರು,ಪ್ರಭುದ್ಧರು ಜಿಲ್ಲೆಯಲ್ಲಿ ಸಾಹುಕಾರ ಅಂತಾ ಹೆಸರು ಮಾಡಿದವರು ಅವರ ಹೇಳಿಕೆ ಕುರಿತು ನಾನು ಯಾವುದೇ ಟೇಕೆ ಟಿಪ್ಪಣೆ ಮಾಡಲು ಹೋಗುವದಿಲ್ಲ ಎಂದರು. ಎಲ್ಲವೂ ಜನರ ಅಭಿಪ್ರಾಯಕ್ಕೆ ಬಿಟ್ಟಿರುವೆ ಅವರು ಕೇಳು ಅಂದರೆ ಕೇಳುವೆ ಇಲ್ಲ ಅಂದರೆ ಇಲ್ಲ ಅಷ್ಟೇ ನನ್ನ ಹೇಳಿಕೆ ಆಗಿತ್ತು ಎಂದು ಸಮಾಜಾಯಿಸಿ ನೀಡಿದರು.
ಪಶುವೈದಕೀಯ ಕಾಲೇಜು ಉದ್ಘಾಟನೆಗೆ ಕೇಂದ್ರದ ಹಲವು ಸಚಿವರು ಬರಬೇಕು ಎಂಬ ನೀರಿಕ್ಷೆ ಇದೆ ಕೇಂದ್ರ ಸರಕಾರದ ಅನುಮತಿ ನೀರಿಕ್ಷೆ ಯಲ್ಲಿರುವೆ ಅದು ಬಂದ ಮೇಲೆ ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ ಮುಗಿದ ತಕ್ಷಣಾದಷ್ಟು ಬೇಗ ಪ್ರಾರಂಭಿಸಲಾಗುವುದು ಅಥಣಿಯ ಭಾವುರಾವ ದೇಶಪಾಂಡೆಯವರ ಹೆಸರಿನಿಂದ ಪ್ರಾರಂಭ ವಾಗಲಿರುವ ಕಾರ್ಯಕ್ರಮಕ್ಕೆ ಕೇಂದ್ರದ ಪ್ರಮುಖರು ಬರುವ ನೀರಿಕ್ಷೆಯಿದೆ ಸಮಯವನ್ನು ಕೇಳಿರುವೆ ಅದು ಆದಷ್ಟು ಬೇಗ ನಿರ್ಧಾರ ಆಗುತ್ತದೆ ಎಂದು ತಿಳಸಿದರು.
ಈ ವೇಳೆ ಮುಖಂಡರುಗಳಾದ ಪ್ರದೀಪ ನಂದಗಾಂವ,ಸಿದರಾಯ ನಾಯಕ,ಶ್ರೀಶೈಲ ನಾಯಕ,ತಿಪ್ಪಣ್ಣ ಭಜಂತ್ರಿ,ಶಿವರುದ್ರ ಗೂಳಪ್ಪನವರ,ಶ್ರೀಶೈಲ ಹಳದಮಳ ಸೇರಿದಂತೆ ಅನೇಕರು ಇದ್ದರು,