ಯಾವುದೇ ಪಕ್ಷದ ಸರಕಾರವಿರಲಿ, ಆ ಸರಕಾರಕ್ಕೆ ದೇಶದ ಹಿತವೇ ಮುಖ್ಯವೆನಿಸಬೇಕು. ಆದರೆ ಇಂದು ನಾವು ಪ್ರತಿಮೆಗಳ ರಾಜಕಾರಣ, ಜಯಂತಿ-ಪುಣ್ಯತಿಥಿಗಳ ಆಚರಣೆ, ನಾಮಕರಣ ಮಾಡುವ ವಿಷಯದಲ್ಲಿ ರಾಜಕಾರಣಕ್ಕೆ ಆದ್ಯತೆ ನೀಡುತ್ತಿರುವದು ಸಾಮಾನ್ಯವೆನಿಸಿದೆ.
ಎಲ್ಲವನ್ನೂ ಉಚಿತವಾಗಿ ಕೊಡುತ್ತೇವೆ ಎಂಬ ಭರವಸೆಗಳ ‘ಗ್ಯಾರಂಟೀ ಕಾರ್ಡು’ಗಳ ರಾಜಕಾರಣ ನಡೆದಿದೆ. ಉಚಿತವಾಗಿ ಯಾವುದನ್ನೂ ಕೊಡಬೇಡಿ.
ಯಾರ ದುಡ್ಡಲ್ಲಿ ಕೊಡುತ್ತೀರಿ? ತೆರಿಗೆದಾರರ ದುಡ್ಡು ಬಳಸಲು ಅವರ ಅನುಮತಿ ಪಡೆಯಿರಿ, ಈ ತೆರಿಗೆದಾರರನ್ನು ಪ್ರತಿನಿಧಿಸುವ ಒಂದು ಸಮಿತಿ ರಚಿಸಿ ಅವರ ಸಲಹೆ ಪಡೆದು ಉಚಿತವಾಗಿ ವಿತರಿಸಿರಿ. ಉಚಿತವಾಗಿ ವಿತರಿಸುವದರಲ್ಲಿಯೂ ಭ್ರಷ್ಟಾಚಾರದ ಪ್ರಕರಣಗಳು ಸಹಜವೆಂಬಂತೆ ನಡೆಯುತ್ತಿವೆ. ಬೇಡಿದವರಿಗೆಲ್ಲ ಮೀಸಲಾತಿ ನೀಡದೆ ಸಂವಿಧಾನ ತಿದ್ದುಪಡಿ ಮಾಡಿದ ಮೇಲೆ ನೀಡಿ.
ನಮ್ಮ ದೇಶ ಮೊದಲು ಏಕಕಾಲಕ್ಕೆ ಚುನಾವಣೆಗಳು ನಡೆಸುವದರ ಬಗ್ಗೆ ದೃಢ ನಿರ್ಧಾರ ಮಾಡಿದರೆ ಕೋಟ್ಯಂತರ ಹಣ ಉಳಿಯಲಿದೆ.
ಮತ ಚಲಾಯಿಸುವದು ಕಡ್ಡಾಯ ಮಾಡಿದರೆ ಅರ್ಹರ ಆಯ್ಕೆ, ಬಡವರ ಆಯ್ಕೆ ಸಾಧ್ಯವಾಗಲಿದೆ. ಈಗಿನ ಸ್ಥಿತಿಯಲ್ಲಿ ೩೦-೩೫% ರಷ್ಟು ಮತಪಡೆದವರೂ ಆಯ್ಕೆಯಾಗಿ ಉಳಿದ ೬೫-೭೦% ಮತದಾರರ ಪ್ರಾತಿನಿಧ್ಯವನ್ನು ಅಲ್ಲಗಳೆದಂತಾಗಿದೆ. ಏಕರೂಪದ ಕಾನೂನುಗಳು ಬರಲಿ. ಯುವಕರಿಗೆ ನಿರುದ್ಯೋಗ ಭತ್ತೆ ನೀಡುವ ಬದಲಿಗೆ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಶುಲ್ಕದಲ್ಲಿ ಸಾಂಕೇತಿಕ ಶುಲ್ಕ ಪಡೆಯಲಿ ಪ್ರಜ್ಞಾವಂತರು ಮಾರ್ಗದರ್ಶನ ಮಾಡಲಿ
ಪ್ರಾ.ಬಿ.ಎಸ್.ಗವಿಮಠ
ಬೆಳಗಾವಿ